WHO ಮುಖ್ಯಸ್ಥರಿಗೆ ಹೊಸ ನಾಮಕರಣವಿತ್ತ ಪ್ರಧಾನಿ ಮೋದಿ…..! 20-04-2022 7:04PM IST / No Comments / Posted In: Latest News, India, Live News ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೊಸ ಹೆಸರನ್ನು ಹೊಂದಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ..? ಜಾಗತಿಕ ನಾಯಕ ಟೆಡ್ರೊಸ್ ಅವರನ್ನು ಇನ್ನ್ಮುಂದೆ ತುಳಸಿ ಭಾಯಿ ಎಂದೂ ಸಂಬೋಧಿಸಬಹುದು. ಬುಧವಾರ ಗಾಂಧಿನಗರದಲ್ಲಿ ಮಹಾತ್ಮ ಗಾಂಧಿಯವರ ಜನ್ಮಸ್ಥಳದಲ್ಲಿ ನಡೆದ ಜಾಗತಿಕ ಆಯುಷ್ ಮತ್ತು ಇನ್ನೋವೇಶನ್ ಶೃಂಗಸಭೆಯಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಅವರು ತಮಗೆ ಗುಜರಾತಿ ಹೆಸರು ಇಡುವಂತೆ ಪ್ರಧಾನಿ ಬಳಿ ಮನವಿ ಮಾಡಿದ್ರು. ಅದಕ್ಕೆ ಮೋದಿ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ಅವರ ಗುಜರಾತಿ ಹೆಸರನ್ನು ತುಳಸಿ ಭಾಯಿ ಎಂದು ಕರೆದಿದ್ದಾರೆ. ತುಳಸಿಯನ್ನು ಪ್ರಮುಖ ಸಸ್ಯವೆಂದು ಪರಿಗಣಿಸಲಾಗಿರುವ ಆಯುರ್ವೇದದ ಕುರಿತು ಪ್ರಧಾನಿ ಮಾತನಾಡುತ್ತಿದ್ದರು. ಡಾ.ಟೆಡ್ರೊಸ್‌ಗೆ ತುಳಸಿ ಭಾಯಿ ಎಂದು ಹೆಸರಿಸುವುದರೊಂದಿಗೆ ಕೊನೆಗೊಂಡ ಕಾರ್ಯಕ್ರಮದಲ್ಲಿ, ಜಾಗತಿಕ ನಾಯಕ ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಪ್ರಧಾನಿ, ತಾನು ಟೆಡ್ರೂಸ್ ಅವರನ್ನು ಭೇಟಿಯಾದಾಗಲೆಲ್ಲಾ ಅವರು ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದರು. ತಾನಿಂದು ಏನೇ ಆಗಿದ್ದರೂ, ತನಗೆ ಬಾಲ್ಯದಿಂದಲೂ ಶಿಕ್ಷಣ ಕಲಿಸಿರುವುದು ಭಾರತೀಯ ಮೂಲದ ಶಿಕ್ಷಕರು. ತನ್ನ ಜೀವನದ ಪ್ರಮುಖ ಹಂತಗಳಲ್ಲಿ ಭಾರತೀಯ ಶಿಕ್ಷಕರು ಪಾತ್ರ ವಹಿಸಿದ್ದಾರೆ ಮತ್ತು ಭಾರತದೊಂದಿಗೆ ಸಂಬಂಧ ಹೊಂದಲು ತುಂಬಾ ಹೆಮ್ಮೆಪಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದಾರೆ. ಇದೀಗ ಅವರು ಗುಜರಾತಿ ಹೆಸರನ್ನಿಡುವಂತೆ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ. ಆದ್ದರಿಂದ ಇಂದು, ಮಹಾತ್ಮ ಗಾಂಧಿಯವರ ಪುಣ್ಯಭೂಮಿಯಲ್ಲಿ ಅವರಿಗೆ ತುಳಸಿಭಾಯಿ ಎಂದು ಹೆಸರಿಡುವುದಾಗಿ ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ ಟೆಡ್ರೂಸ್ ಗುಜರಾತಿ ಭಾಷೆಯಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡಿದ್ದಾರೆ. ನೆರೆದಿದ್ದ ಜನರನ್ನು ಉದ್ದೇಶಿಸಿ ಗುಜರಾತಿ ಭಾಷೆಯಲ್ಲಿ ಮಾತನಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. From the land of Mahatma Gandhi, a Gujarati name has been given to my friend, @DrTedros. pic.twitter.com/jxWqZ9Ng6O — Narendra Modi (@narendramodi) April 20, 2022 #WATCH | WHO Director-General Dr Tedros Adhanom Ghebreyesus greets the public in Gujarati during the inaugural ceremony of the WHO-Global Centre for Traditional Medicine in Jamnagar. pic.twitter.com/Mexd6RUXLw — ANI (@ANI) April 19, 2022