alex Certify ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಮೇ ಮೊದಲ ವಾರ ಸಭೆ; ಸಿಎಂ ಭರವಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಮೇ ಮೊದಲ ವಾರ ಸಭೆ; ಸಿಎಂ ಭರವಸೆ

ಶಿವಮೊಗ್ಗ : ಮಲೆನಾಡಿನಲ್ಲಿ ಬಹುಕಾಲದಿಂದ ಅರಣ್ಯ ಕಾಯ್ದೆ ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದೆ. ಈ ಕಾಯ್ದೆಯ ಸುತ್ತ ಮುತ್ತ ಅನೇಕ ಸಾಧಕ-ಬಾಧಕಗಳಿವೆ. ಈ ನಿಟ್ಟಿನಲ್ಲಿ ಮಲೆನಾಡು ಭಾಗದ ಜನಪ್ರತಿನಿಧಿಗಳ ಜತೆಗೆ ಚರ್ಚಿಸುವ ಸಂಬಂಧ ಮೇ ಮೊದಲ ವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಕ್ಷ ಸಂಘಟನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂಬಂಧ ನಗರಕ್ಕೆ ಆಗಮಿಸಿದ್ದ ಅವರು ಬುಧವಾರ ಬೆಳಗ್ಗೆ ಇಲ್ಲಿನ ಹರ್ಷ ದಿ ಫೆರ್ನ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪಕ್ಷದ ಸಂಘಟನಾತ್ಮಕ ಕಾರ್ಯಕ್ರಮಗಳ ನಿಮಿತ್ತ ನಾನಿಲ್ಲಿಗೆ ಬಂದಿದ್ದೇನೆ. ಮಂಗಳವಾರ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳ ಪ್ರಮುಖರ ಜತೆಗೆ ಸಭೆ ನಡೆಸಲಾಯಿತು. ಅದರ ಜತೆಗೆ ಪಕ್ಷದ ಶಕ್ತಿ ಕೇಂದ್ರ ಪ್ರಮುಖರ ಜತೆಗೆ ಸಭೆ ನಡೆದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಗಟ್ಟಿಯಾಗಿದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆ ಬಂದಿವೆ. ಅದರಲ್ಲಿ ಬಹಳ ದಿನಗಳ ಕಾಲ ಚರ್ಚೆಯಲ್ಲಿರುವ ಅರಣ್ಯ ಕಾಯ್ದೆ ಸಮಸ್ಯೆಯೂ ಒಂದು. ಆ ಬಗ್ಗೆಯೇ ಈಗ ಒಂದು ನಿರ್ಧಾರಕ್ಕೆ ಬರಬೇಕಿದೆ ಎಂದರು.

ಜಹಾಂಗೀರ್ಪುರಿ ಜಾಗ ಒತ್ತುವರಿ: ಸುಪ್ರೀಂ ಮಧ್ಯಪ್ರವೇಶದ ನಂತರ ಕಾರ್ಯಾಚರಣೆ ಸ್ಥಗಿತ

ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡಂತೆ ಪಶ್ವಿಮ ಘಟ್ಟ ಭಾಗದ ಅರಣ್ಯದೊಳಗೆ ಅನೇಕ ಪ್ರಾಕ್ಟಿಕಲ್ ಸಮಸ್ಯೆಗಳಿವೆ. ಕೆಲವು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದ್ದರೆ, ಇನ್ನು ಕೆಲವು ಸಮಸ್ಯೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೂ ಇವೆ. ಹಾಗೆಯೇ ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲೂ ಕೆಲವು ಸಮಸ್ಯೆಗಳಿವೆ. ಬಗಹರ್ ಹುಕುಂ ಮಾಡಿಕೊಂಡವರು ಮತ್ತು ಅರಣ್ಯ ಪ್ರದೇಶದ ಜನರ ಹಿತಾದೃಷ್ಟಿಯಿಂದ ಒಂದು ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆಯೂ ಇದೆ. ಈ ಬಗ್ಗೆಯೇ ಚರ್ಚೆ ನಡೆಸಲು ಮೇ ಮೊದಲ ವಾರ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...