ತನ್ನ ಒಪ್ಪಿಗೆ ಇಲ್ಲದೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದ ಯುವತಿಯೊಬ್ಬಳು ಯುವಕನ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದ ಪ್ರಸಂಗ ಆಂಧ್ರದಲ್ಲಿ ನಡೆದಿದೆ.
ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಡೇರು ನಿವಾಸಿ ರಾಮು ನಾಯ್ಡು (28) ರವಿಕಮಠದ ವಿಯ್ಯಪು ಪುಷ್ಪಾ (22) ಎಂಬುವರೊಂದಿಗೆ ನಿಶ್ಚಿತಾರ್ಥವಾಗಿತ್ತು. ಮೇ 28 ರಂದು ಅವರ ಮದುವೆ ನಡೆಸಲು ಪೋಷಕರು ನಿರ್ಧರಿಸಿದ್ದರು.
ಹೈದರಾಬಾದ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ರಾಮು ನಾಯ್ಡು ಇತ್ತೀಚೆಗೆ ಮದುವೆ ತಯಾರಿಗಾಗಿ ತಮ್ಮ ಊರಿಗೆ ಬಂದಿದ್ದರು, ವಿಷಯ ತಿಳಿದ ಪುಷ್ಪಾ, ಖಾಸಗಿಯಾಗಿ ಮಾತನಾಡಬೇಕೆಂದು ಭಾವಿ ಪತಿಯನ್ನು ಆಹ್ವಾನಿಸಿ ತನ್ನ ಮನೆಯ ಹತ್ತಿರದ ಗುಡ್ಡಕ್ಕೆ ಕರೆದೊಯ್ದಳು.
ಬಳಿಕ ಗಿಫ್ಟ್ ನೀಡುವ ನೆಪಹೇಳಿ ಕಣ್ಣು ಮುಚ್ಚುವಂತೆ ಪುಷ್ಪಾ ಕೋರಿದ್ದಲ್ಲದೇ ತನ್ನ ದುಪಟ್ಟಾದಿಂದ ಅವನ ಕಣ್ಣುಗಳನ್ನು ಕಟ್ಟಿದಳು. ಕ್ಷಣ ಮಾತ್ರದಲ್ಲೇ ಪುಷ್ಪ ಚಾಕು ತೆಗೆದು ಅವನ ಕತ್ತು ಕೊಯ್ದು, ನನಗೆ ನಿನ್ನನ್ನು ಮದುವೆಯಾಗಲು ಆಸಕ್ತಿ ಇಲ್ಲ ಎಂದಳು.
ಬೆಟ್ಟದಿಂದ ರಾಮು ಬಿದ್ದಿದ್ದಾಗಿ ಕಥೆ ಕಟ್ಟುವ ಮುನ್ನ ತನ್ನ ಸ್ಕೂಟಿಯಲ್ಲಿ ಸ್ಥಳೀಯರ ನೆರವಿನಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಳು. ಆತನ ಸ್ಥಿತಿ ಚಿಂತಾಜನಕವಾಗಿದೆ.