ಕಾರಿನ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದಕ್ಕೆ ದುಬಾರಿ ಬೆಲೆತೆತ್ತ ಚಾಲಕ…! 20-04-2022 10:08AM IST / No Comments / Posted In: Latest News, Live News, International ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರೊಂದು ನಿಧಾನವಾಗಿ ಹಿಂದಕ್ಕೆ ಸರಿಯುತ್ತಾ ನದಿಗೆ ಬೀಳುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ಕೆಂಪು ಪಿಯುಗಿಯೊವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಆದರೆ, ಕಾರ್ ಡ್ರೈವರ್ ಹ್ಯಾಂಡ್ಬ್ರೇಕ್ ಹಾಕಲು ಮರೆತಿದ್ದಾನೆ. ಇದರಿಂದ ಪಾರ್ಕಿಂಗ್ ಸ್ಲಾಟ್ನಿಂದ ಹಿಮ್ಮುಖವಾಗಿ ನಿಧಾನಕ್ಕೆ ಜಾರಿದ ಕಾರು, ರಸ್ತೆ ದಾಟಿ ಹತ್ತಿರದ ಡೌಗಾವಾ ನದಿಗೆ ಬಿದ್ದಿದೆ ಟ್ವಿಟ್ಟರ್ನಲ್ಲಿ ನೌ ದಿಸ್ ನ್ಯೂಸ್ ಹಂಚಿಕೊಂಡ ವಿಡಿಯೋದಲ್ಲಿ ಕೆಂಪು ಕಾರು ನಿಧಾನವಾಗಿ ಹಿಂದಕ್ಕೆ ಚಲಿಸುತ್ತಿರುವುದನ್ನು ತೋರಿಸುತ್ತದೆ. ಈ ವೇಳೆ ಅಡ್ಡ ಬಂದ ಬಿಳಿ ಕಾರು ಘರ್ಷಣೆಯನ್ನು ತಪ್ಪಿಸಿ ಎಡಭಾಗಕ್ಕೆ ತಿರುಗುತ್ತದೆ. ಕೆಂಪು ಕಾರು ಮುಂದಿನ ಲೇನ್ಗೆ ಪ್ರವೇಶಿಸುತ್ತದೆ. ಅಲ್ಲಿ ಇತರ ವಾಹನಗಳು ವೇಗವಾಗಿ ಬರುತ್ತವೆ. ಮತ್ತೊಂದು ಬಿಳಿ ಕಾರು ಚಲಿಸುತ್ತಿರುವ ಕೆಂಪು ಕಾರನ್ನು ಗುರುತಿಸಿ ತನ್ನ ವೇಗವನ್ನು ನಿಧಾನಗೊಳಿಸುತ್ತದೆ. ಕೆಂಪು ಬಣ್ಣದ ಕಾರು ಯಾವುದೇ ಅಡೆ-ತಡೆಯಿಲ್ಲದೆ ನಿಧಾನವಾಗಿ ಹಿಂದಕ್ಕೆ ಹೋಗುತ್ತಾ ನದಿಗೆ ಬಿದ್ದು, ಮುಳುಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಇದರ ವಿಡಿಯೋವನ್ನು 3,06,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ನಂತರ ಕಾರನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಎಂದು ಹೇಳಲಾಗಿದೆ. This car took a solo journey across a busy road after the driver forgot to apply the handbrake. No one was hurt, and the car has been retrieved from the river. pic.twitter.com/ZwuiNH9sei — NowThis Impact (@nowthisimpact) April 19, 2022