ಪ್ಯಾನ್ ಗೆ ಒಂದು ಸ್ಪೂನ್ ತುಪ್ಪ ಹಾಕಿ ಗೋಡಂಬಿಯನ್ನು ಕೆಂಪಗೆ ಆಗುವವರೆಗೆ ಹುರಿದುಕೊಳ್ಳಬೇಕು. ನಂತರ ದ್ರಾಕ್ಷಿಯನ್ನು ಸಣ್ಣ ಉರಿಯಲ್ಲಿ ದಪ್ಪ ಆಗುವವರೆಗೆ ಹುರಿದು ಕೊಳ್ಳಬೇಕು.
ನಂತರ ಶಾವಿಗೆಯನ್ನು ಹಾಕಿ ಕೆಂಪಗೆ ಆಗುವವರೆಗೆ ಹುರಿದು ಕೊಳ್ಳಬೇಕು. ಅದರ ಮೇಲೆ ಸಬ್ಬಕ್ಕಿ ಹಾಕಿ ಕಲಸಿ. ಸಬ್ಬಕ್ಕಿಯನ್ನು ಹುರಿದುಕೊಳ್ಳುವ ಅಗತ್ಯವಿಲ್ಲ. ನಂತರ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಬೇಕು. ಬೆಂದ ನಂತರ ಸಕ್ಕರೆ ಹಾಕಿಕೊಳ್ಳಬೇಕು. ನಂತರ ಹುರಿದ ಗೋಡಂಬಿ, ಹುರಿದ ದ್ರಾಕ್ಷಿ, ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಬೇಕು. ಪಾಯಸ ಗಟ್ಟಿ ಎನಿಸಿದರೆ ಹಾಲನ್ನು ಹಾಕಿ ಮತ್ತೆ ಕೆದಕಬಹುದು. ಈಗ ಪಾಯಸ ಸವಿಯಲು ಸಿದ್ಧ.