ಸೆಕ್ಸ್ ಒಂದು ಸ್ವಾಭಾವಿಕ ಚಟುವಟಿಕೆ. ಇದ್ರ ಬಗ್ಗೆ ಮಾತನಾಡಲು ಮುಜುಗರಪಟ್ಟುಕೊಳ್ಳಬೇಕಿಲ್ಲ. ಬಹುತೇಕ ಮಹಿಳೆಯರು ಸೆಕ್ಸ್ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಅನೇಕ ಸಂಗತಿಗಳನ್ನು ಮುಚ್ಚಿಡ್ತಾರೆ. ಸೆಕ್ಸ್ ವಿಚಾರದಲ್ಲಿ ಮಹಿಳೆಯರು ಮೇಲೊಂದು ಒಳಗೊಂದು ಸ್ವಭಾವ ಹೊಂದಿರ್ತಾರೆ ಎಂದ್ರೆ ತಪ್ಪಾಗಲಾರದು. ಸೆಕ್ಸ್ ಗೂ ಮುನ್ನ ಅನೇಕ ತಯಾರಿಗಳು ಸದ್ದಿಲ್ಲದೆ ನಡೆಯುತ್ತವೆ. ಆದ್ರೆ ಅದನ್ನು ಸಂಗಾತಿ ಬಳಿಯೂ ಮುಚ್ಚಿಡುವ ಪ್ರಯತ್ನ ಮಾಡ್ತಾರೆ.
ಸೆಕ್ಸ್ ಗೂ ಮುನ್ನ ಮಹಿಳೆಯರು ಒಳ ಉಡುಪಿನ ಬಗ್ಗೆ ಹೆಚ್ಚು ಗಮನ ನೀಡ್ತಾರೆ. ಸೆಕ್ಸಿಯಾಗಿರುವ ಒಳ ಉಡುಪು ಧರಿಸಲು ಇಷ್ಟಪಡ್ತಾರೆ. ಸಂಗಾತಿಯನ್ನು ಒಳ ಉಡುಪು ಆಕರ್ಷಿಸಲಿ ಎಂಬುದು ಅವ್ರ ಉದ್ದೇಶ. ಆದ್ರೆ ಈ ವಿಷ್ಯವನ್ನು ಬಹುತೇಕ ಮಹಿಳೆಯರು ಒಪ್ಪಿಕೊಳ್ಳುವುದಿಲ್ಲ.
ಮೈ, ಕೈ, ಖಾಸಗಿ ಅಂಗ ಆಕರ್ಷಕವಾಗಿರಲಿ ಎಂದು ಮಹಿಳೆಯರು ಬಯಸ್ತಾರೆ. ಅದ್ರಲ್ಲೂ ಸಂಗಾತಿಯನ್ನು ಮೃದು ಚರ್ಮ ಆಕರ್ಷಿಸಬೇಕೆಂಬುದು ಅವ್ರ ಆಸೆ. ಹಾಗಾಗಿಯೇ ಶಾರೀರಿಕ ಸಂಬಂಧ ಬೆಳೆಸಲು ವಿಶೇಷ ಪ್ಲಾನ್ ಮಾಡಿದ್ದರೆ ವ್ಯಾಕ್ಸ್ ಅಥವಾ ಶೇವ್ ಮಾಡಲು ಮಹಿಳೆಯರು ಮರೆಯೋದಿಲ್ಲ.
ಬೆವರಿನ ವಾಸನೆ ಸಂಭೋಗದ ಸುಖವನ್ನು ಕಡಿಮೆ ಮಾಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಹಾಸಿಗೆಗೆ ಹೋಗುವ ಮುನ್ನ ಕೆಲ ಮಹಿಳೆಯರು ಸೆಂಟ್ ಹಾಕಿಕೊಳ್ಳಲು ಮರೆಯುವುದಿಲ್ಲ. ದೇಹದಿಂದ ಬರುವ ಸುವಾಸನೆ ಸಂಗಾತಿಯನ್ನು ಸೆಳೆಯಲಿ ಎಂಬುದು ಅವ್ರ ಆಸೆ.
ಸಂಭೋಗಕ್ಕಿಂತ ಮುನ್ನ ನೈರ್ಮಲ್ಯ ಬಹಳ ಮುಖ್ಯ. ಶಾರೀರಿಕ ಸಂಬಂಧದ ವೇಳೆ ಸ್ವಚ್ಛತೆ ಕೊರತೆ ಕಾಣಿಸಿಕೊಂಡ್ರೆ ಮುಂದೆ ಸೋಂಕು ಕಾಡುತ್ತದೆ. ಇದೇ ಕಾರಣಕ್ಕೆ ಬಹುತೇಕ ಮಹಿಳೆಯರು ಸಂಭೋಗಕ್ಕೂ ಮುನ್ನ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿಕೊಳ್ತಾರೆ. ಸಂಗಾತಿಗೂ ಸ್ವಚ್ಛಗೊಳಿಸಿಕೊಳ್ಳುವಂತೆ ಸಲಹೆ ನೀಡ್ತಾರಂತೆ.
ಕೆಲ ಮಹಿಳೆಯರು ತಮ್ಮ ದೇಹದ ಬಗ್ಗೆಯೂ ಹೆಚ್ಚು ಗಮನ ನೀಡ್ತಾರೆ. ಆ ಕ್ಷಣವನ್ನು ಮಧುರವಾಗಿಸಲು, ಪತಿ ಮುಂದೆ ಸುಂದರವಾಗಿ ಕಾಣಲು ಬಯಸ್ತಾರೆ. ಹಾಗಾಗಿಯೇ ಆ ದಿನ ಸಲಾಡ್ ಹಾಗೂ ಹಣ್ಣು ತಿನ್ನುತ್ತಾರೆ.
ಅಸುರಕ್ಷಿತ ಸೆಕ್ಸ್ ಬಗ್ಗೆ ಮಹಿಳೆಯರು ಜಾಗೃತರಾಗಿದ್ದಾರೆ. ಅನುಸರಿಸುತ್ತಿರುವ ವಿಧಾನ ಎಷ್ಟು ಸುರಕ್ಷಿತ ಎಂಬುದನ್ನು ಆಲೋಚನೆ ಮಾಡ್ತಾರೆ. ಈ ಬಗ್ಗೆ ಸಂಗಾತಿಗೂ ಸಲಹೆ ನೀಡ್ತಾರೆ.
ಹಾಸಿಗೆಗೆ ಹೋಗುವ ಮುನ್ನ ಬಹುತೇಕ ಮಹಿಳೆಯರು ಮೂತ್ರ ವಿಸರ್ಜನೆ ಮಾಡಿಯೇ ಹೋಗ್ತಾರೆ. ಸೆಕ್ಸ್ ಮಧ್ಯದಲ್ಲಿ ಈ ಸಮಸ್ಯೆ ಕಾಡಿದ್ರೆ ಎಂಬ ಭಯಕ್ಕೆ ಬಹುತೇಕ ಮಹಿಳೆಯರು ಸೆಕ್ಸ್ ಗೂ ಮುನ್ನ ಮೂತ್ರ ವಿಸರ್ಜನೆ ಮಾಡ್ತಾರೆ.