ಸರ್ಕಾರದ ವಿರುದ್ಧ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಆರೋಪದ ನೀಡಿಕೆ ಬೆನ್ನಲ್ಲೆ ಇದೀಗ ಬಾಗಲಕೋಟೆಯ ದಿಂಗಾಲೇಶ್ವರ ಸ್ವಾಮೀಜಿ ಅವರು ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದಾರೆ.
ಮಠಗಳಿಗೆ ಅನುದಾನ ಪಡೆಯಲು ಸರ್ಕಾರಕ್ಕೆ ಕಮಿಷನ್ ನೀಡಬೇಕು ಎಂದು ಅವರು ಆರೋಪಿಸಿದ್ದಾರೆ. ಎಲ್ಲರಿಗೂ 30 ಪರ್ಸೆಂಟ್ ಕಮಿಷನ್ ನೀಡಬೇಕು.
ಬಿಜೆಪಿ ನಾಯಕರ ಬಾಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ……? ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ
ಶಾಸಕರು ಮತ್ತು ಅಧಿಕಾರಿಗಳಿಗೆ ಕಮಿಷನ್ ನೀಡಿ ಮಠಗಳಿಗೆ ಅನುದಾನ ಬಿಡುಗಡೆ ಗೊಳಿಸಿ ಕೊಳ್ಳಬೇಕು. ಹಿಂದಿನ ಎಲ್ಲಾ ಸರ್ಕಾರಗಳ ಆಡಳಿತದಲ್ಲೂ ಸಹ ಕಮಿಷನ್ ನೀಡಿ ಅನುದಾನ ಬಿಡುಗಡೆಗೊಳಿಸಿ ಕೊಳ್ಳಲಾಗಿತ್ತು. ಎಂದು ಅವರು ಕಮಿಷನ್ ದಂಧೆ ವಿರುದ್ಧ ಹರಿಹಾಯ್ದಿದ್ದಾರೆ.