ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಭ್ರಷ್ಟಾಚಾರಗಳ ಕಡತಗಳನ್ನು ಈಗ ತೆಗೆಯುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಅಂದು ಬಾಯಲ್ಲಿ ಕಡುಬು ತುಂಬಿಕೊಂಡಿದ್ದರಾ..? ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎಷ್ಟು ವರ್ಷವಾಯ್ತು..? ಈ ಹಿಂದೆ ಇವರು ಕೂಡ ವಿರೋಧ ಪಕ್ಷದಲ್ಲಿ ಇದ್ದವರೇ ಅಲ್ಲವೇ..? ಅಂದು ಭ್ರಷ್ಟಾಚಾರಗಳ ಬಗ್ಗೆ ಮಾತನಾಡದವರು ಇಂದು ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ ಎಂದ ಕೂಡಲೇ ಮಾತನಾಡಲು ಆರಂಭಿಸಿದರಾ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಂದು ಹೇಳುತ್ತಿರುವ ಬಿಜೆಪಿ ನಾಯಕರು ಅಂದು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ..? ಇಂದು ಹೇಳಿದರೆ ಅದನ್ನು ಜನ ನಂಬುತ್ತಾರಾ..? ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗೊತ್ತಿದ್ದೂ ಸುಮ್ಮನಿರುವುದು ಕೂಡ ಅಪರಾಧವೇ..! ಜನರಿಗೆ ಎಲ್ಲವೂ ತಿಳಿಯುತ್ತೆ ಎಂದಿದ್ದಾರೆ.