ಅಂತರ್ಜಾಲವು ತಮಾಷೆಯ, ವಿನೋದಮಯ ಮುಂತಾದ ವಿಡಿಯೋಗಳಿಂದ ತುಂಬಿ ಹೋಗಿದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗುತ್ತಿದೆ.
ದೇಸಿ ಮಹಿಳೆಯೊಬ್ಬರು ಟ್ರೆಂಡಿಂಗ್ ಬೆಂಗಾಲಿ ಹಾಡು ಕಚಾ ಬಾದಮ್ಗೆ ಸ್ಟೆಪ್ಸ್ ಹಾಕಿದ್ದಾರೆ. ಕಚಾ ಬದಾಮ್ ಹಾಡನ್ನು ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಹಾಡಿದ್ದಾರೆ. ಸೂಪರ್ ಡೂಪರ್ ವೈರಲ್ ಹಾಡಿಗೆ ಅನೇಕ ಮಂದಿ ಪ್ರಭಾವಿಗಳು ಮತ್ತು ಸೆಲೆಬ್ರಿಟಿಗಳು ಡಾನ್ಸ್ ಮಾಡಿದ್ದಾರೆ.
ಇದೀಗ ಮಹಿಳೆ ಸಖತ್ ಆಗಿ ಸ್ಟೆಪ್ಸ್ ಹಾಕಿರೋ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದು ಸಾವಿರಾರು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಗುಂಪಿನಲ್ಲಿದ್ದ ಮಹಿಳೆಯರ ಪೈಕಿ ನೀಲಿ ಬಣ್ಣದ ಸೀರೆ ಉಟ್ಟ ಮಹಿಳೆಯೊಬ್ಬರು ಅದ್ಭುತವಾಗಿ ಕಚಾ ಬಾದಾಮ್ ಗೆ ನೃತ್ಯ ಮಾಡಿದ್ದಾರೆ. ತನ್ನ ನಾಲಿಗೆಯನ್ನು ಹಾವಿನಂತೆ ಹೊರಗೆಳೆಯುತ್ತಾ ನಾಗಿನ್ ನೃತ್ಯ ಮಾಡಿದ್ದಾರೆ. ಮಹಿಳೆಯ ಡಾನ್ಸ್ ನೋಡಿದ ನೆರೆದವರು ನಗೆ ಬೀರಿದ್ದಾರೆ. ಮಹಿಳೆ ತನ್ನದೇ ಆದ ಶೈಲಿಯಲ್ಲಿ ನಾಗಿಣಿ ಡಾನ್ಸ್ ಮಾಡಿದ್ದಾರೆ.
ನೆಟ್ಟಿಗರು ವಿಡಿಯೋವನ್ನು ವಿನೋದಮಯವಾಗಿ ಕಂಡುಕೊಂಡಿದ್ದಾರೆ. ಕಾಮೆಂಟ್ ವಿಭಾಗವನ್ನು ನಗುವ ಎಮೋಜಿಗಳೊಂದಿಗೆ ತುಂಬಿದ್ದಾರೆ.