alex Certify ನಾಲಿಗೆಯಲ್ಲಿ ನಟ್ ಬೋಲ್ಟ್ ತಿರುಗಿಸುತ್ತೆ ಈ ಗಿಳಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲಿಗೆಯಲ್ಲಿ ನಟ್ ಬೋಲ್ಟ್ ತಿರುಗಿಸುತ್ತೆ ಈ ಗಿಳಿ….!

ಪ್ರಾಣಿ-ಪಕ್ಷಿಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇವುಗಳ ವಿಡಿಯೋ ನೋಡಿದ್ರೆ ಮನದಲ್ಲಿ ಎಂತಹ ಬೇಸರವಿದ್ರು ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತದೆ. ಇದೀಗ ಗಿಳಿಯ ವಿಡಿಯೋವೊಂದು ಆನ್ಲೈನ್ ನಲ್ಲಿ ಸದ್ದು ಮಾಡಿದೆ.

ಗಿಳಿಗಳು ಮನುಷ್ಯರಿಂದ ಮೌಖಿಕ ಸಂವಹನ ಕಲೆಯನ್ನು ಕಲಿತಿವೆ ಎಂದು ಬಹಳ ಹಿಂದಿನಿಂದಲೂ ತಿಳಿದುಬಂದಿದೆ. ಗಿಣಿಗಳಿಗೆ ಮಾತು ಕಲಿಸಿದ್ರೆ, ಅವು ಕೂಡ ಮಾತನಾಡುತ್ತವೆ ಅನ್ನೋದು ನಿಮಗೆ ಗೊತ್ತೇ ಇದೆ. ತಮ್ಮ ಸುತ್ತಲಿನ ಜನರು ಕೇಳಿದ ಪದಗಳನ್ನು ಅವು ಉಚ್ಚರಿಸುತ್ತವೆ. ಆದರೆ, ಈ ಗಿಳಿ ಮನುಷ್ಯರಿಂದ ಎಂಜಿನಿಯರಿಂಗ್ ಕೌಶಲ್ಯಗಳನ್ನು ಕಲಿತಿದೆ. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋವು ಮೆಕ್ಯಾನಿಕ್ ಗಿಣಿಯೆಂದೇ ಕರೆಯಲ್ಪಟ್ಟಿದೆ.

ಗಿಳಿಯು ತನ್ನ ನಾಲಿಗೆಯನ್ನು ಬಳಸಿ ನಟ್ ಬೋಲ್ಟ್ ಅನ್ನು ತೆಗೆದಿದೆ. ನಟ್ ಬೋಲ್ಟ್‌ನ ಅಂಚಿನ ಕಡೆಗೆ ಮತ್ತು ಅಂಚಿಗೆ ತಲುಪಿದಾಗ ಸ್ಕ್ರೂ ಅನ್ನು ಮೇಲಕ್ಕೆ ಹಿಡಿದಿಡಲು ಅದು ತನ್ನ ನಾಲಿಗೆಯಿಂದ ಬಲ ಪ್ರಯೋಗ ಮಾಡಿದೆ. ನಟ್ ಬೋಲ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಭೌತಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಯಾವ ವೈವಿಧ್ಯಮಯ ಸಾಮರ್ಥ್ಯಗಳು ಮತ್ತು ಬುದ್ಧಿವಂತಿಕೆಯು ಗಿಳಿಗಳಿಗೆ ಸಾಧ್ಯವಾಗುತ್ತದೆ ಎಂಬುದು ಆಶ್ಚರ್ಯವಾಗುತ್ತದೆ. ಅದೂ ಅಲ್ಲದೆ ನಾಲಗೆಯಿಂದ ಭಾರಿ ವೇಗದಲ್ಲಿ ನಟ್ ಅನ್ನು ಗಿಳಿ ತಿರುಗಿಸಿದ್ದು ನಿಜಕ್ಕೂ ಅಚ್ಚರಿತರಿಸಿದೆ.

ಈ ವಿಡಿಯೋ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಕೆಲವರು ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ರೆ, ಇನ್ನೂ ಕೆಲವರು ಋಣಾತ್ಮಕ ಕಾಮೆಂಟ್ ಗಳನ್ನು ಮಾಡಿದ್ದಾರೆ.

https://twitter.com/TheFigen/status/1514656679819984903?ref_src=twsrc%5Etfw%7Ctwcamp%5Etweetembed%7Ctwterm%5E1514780105427410946%7Ctwgr%5E%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fthis-parrot-can-open-a-nut-bolt-with-its-tongue-4996039.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...