
ನಗರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಫುಡ್ ಡೆಲಿವರಿ ಉದ್ಯಮಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.
ಫುಡ್ ಡೆಲಿವರಿ ಉದ್ಯಮದಲ್ಲಿ ಹೋಟೆಲ್‌ಗಳಿಂದ ಮನೆಮನೆಗೆ, ಕಚೇರಿಗಳಿಗೆ ಆಹಾರವನ್ನು ಅತಿವೇಗದಲ್ಲಿ ತಲುಪಿಸಲು ಫುಡ್ ಡೆಲಿವರಿ ಬಾಯ್ ಗಳು ವೇಗದ ಚಾಲನೆ ಮಾಡುತ್ತಿದ್ದು, ಇದು ಪೊಲೀಸರ ತಾಳ್ಮೆಗೆಡಿಸಿದೆ. ಇದಕ್ಕೆ ವಿಶೇಷ ಗಮನಕೊಟ್ಟು ಪೊಲೀಸರು ಬ್ರೇಕ್ ಹಾಕುತ್ತಿದ್ದಾರೆ.
10 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಫುಡ್ ಪ್ಯಾಕೇಜುಗಳನ್ನು ವಿತರಿಸಲು ಡೆಲಿವರಿ ಹುಡುಗರು ರೇಸಿಂಗ್ ಮಾಡುತ್ತಿದ್ದಾರೆ. ನಾವು ಶೀಘ್ರದಲ್ಲೇ ಅವರಿಗೆ ನೋಟಿಸ್ ನೀಡಲು ಪ್ರಾರಂಭಿಸುತ್ತೇವೆ ಎಂದು ಸಂಚಾರ ಪೊಲೀಸ್ ಮುಖ್ಯಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಮಸ್ಯೆಯು ನಿರ್ಲಕ್ಷಿಸಲಾಗದಷ್ಟು ಗಂಭೀರವಾಗಿದೆ. ಡೆಲಿವರಿ ಹುಡುಗರು ಸಮಯದ ಮಿತಿಯಲ್ಲಿ ಸ್ಥಳಕ್ಕೆ ತಲುಪಲು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಂಬುದು ಪೊಲೀಸರ ಆಕ್ಷೇಪಣೆಯಾಗಿದೆ.
ಒನ್ ವೇನಲ್ಲಿ ಪ್ರಯಾಣ, ಫುಟ್‌ಪಾತ್‌ನಲ್ಲಿ ಸಾಗುವುದು, ಅಜಾಗರೂಕ ಹಾಗೂ ವೇಗದ ಚಾಲನೆ ಸಾಮಾನ್ಯ ಉಲ್ಲಂಘನೆಯಾಗಿದೆ ಎಂಬುದು ಪೊಲೀಸರ ಮಾಹಿತಿ.