ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆಗೆ ಇಂದು ಚಾಲನೆ ದೊರೆತಿದೆ.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಲಮಟ್ಟಿಯಲ್ಲಿ ಪವಿತ್ರ ಜಲವನ್ನು ಕಲಶಕ್ಕೆ ತುಂಬುವ ಮೂಲಕ ಯಾತ್ರೆಗೆ ಚಾಲನೆ ನೀಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡ ಮಂಡ್ಯದ ಕೆ ಆರ್ ಎಸ್ ಜಲಾಶಯದ ಬಳಿ ಪೂಜೆ ಮಾಡುವ ಮೂಲಕ ಜನತಾ ಜಲಧಾರೆಗೆ ಚಾಲನೆ ನೀಡಿದರು.
ಈ ಯಾತ್ರೆಯಲ್ಲಿ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಕ್ಕೆ ತುಂಬಿ ಕೊಳ್ಳಲಾಗುತ್ತದೆ. ನಂತರ ಕಳಶದ ವ್ಯವಸ್ಥೆಯುಳ್ಳ ವಾಹನಗಳಲ್ಲಿ ನೀರನ್ನು ಸಂಗ್ರಹಿಸಲಾಗುವುದು.
ಜಲಧಾರೆಯ ಕಳಶವನ್ನು ಹೊತ್ತ ಗಂಗಾ ರಥಗಳು ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದೆ. ಮೇ 8 ರ ನಂತರ ಬೆಂಗಳೂರು ತಲುಪಲಿದೆ. ನಂತರ ಕಳಶದ ನೀರನ್ನು ಒಂದು ಕಲಶಕ್ಕೆ ತೆಗೆದು ಜೆಡಿಎಸ್ ಕಚೇರಿಯಲ್ಲಿ ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುವುದು.