ನ್ಯೂಯಾರ್ಕ್ ನಗರದಲ್ಲಿ ‘ತಲೆಯಿಲ್ಲದ ಮನುಷ್ಯನ’ನ್ನು ಗೂಗಲ್ ಮ್ಯಾಪ್ನಲ್ಲಿ ಕಂಡ ನೆಟ್ಟಿಗರು ಹೌಹಾರಿದ್ದಾರೆ.
ಹ್ಯಾಜ್ ಮ್ಯಾಟ್ ಸ್ಯೂಟ್ ತೊಟ್ಟ ಹೆಡ್ ಲೆಸ್ ವ್ಯಕ್ತಿ ರಸ್ತೆಯಲ್ಲಿ ಸಾಗುವುದು ಕಾಣಿಸುತ್ತದೆ. ಕೈಕಾಲು ಸಹ ಕಾಣಿಸದೇ ಇರುವುದು ನೋಡುಗರನ್ನು ಬೆಚ್ಚಿಬೀಳಿಸಿದೆ.
ವರದಿಗಳ ಪ್ರಕಾರ ಈ ಚಿತ್ರವು ನ್ಯೂಯಾರ್ಕ್ನ ಬ್ರೂಕ್ಲಿನ್ ನೇವಿ ಯಾರ್ಡ್ನದ್ದಾಗಿದೆ. ಭಾರೀ ಭದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೂಟ್ ಹಾಕಿ ರಸ್ತೆಯಲ್ಲಿ ಸಾಗಿದ್ದರ ಹಿಂದೆ ಕಾರಣ ಏನಿತ್ತು ಎಂಬುದು ಗೊತ್ತಾಗಿಲ್ಲ.
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನಿವಾಸಕ್ಕೆ ಸ್ವಾಮೀಜಿಗಳ ಭೇಟಿ
ಗೂಗಲ್ ವರ್ಚುಯಲ್ ಟೂರ್ನಲ್ಲಿ ಮೋಜು, ಡ್ಯಾನ್ಸ್, ಮತ್ತಿತರ ಚಟುವಟಿಕೆ ಕಾಣಬಹುದು. ಆದರೆ ಈ ಸ್ಯೂಟ್ ನಲ್ಲಿ ಸಾಗಿದ್ದರ ಕುರಿತು ಮಾಹಿತಿ ಇಲ್ಲ.
ರೆಡ್ ಹಿಟ್ ಬಳಕೆದಾರನೊಬ್ಬ ಕೋವಿಡ್ ವರ್ಷನ್ ಎಂದು ಹಾಸ್ಯ ಮಾಡಿದ್ದಾನೆ. ಇದು ಟ್ವೀಟರ್ನಲ್ಲೂ ಶೇರ್ ಆಗಿದೆ.
ಗೂಗಲ್ ಮ್ಯಾಪ್ನಲ್ಲಿ ಇಂತಹ ವಿಚಿತ್ರ ದೃಶ್ಯಗಳು ಹೆಚ್ಚು ಸಾಮಾನ್ಯವಾಗುತ್ತಿದೆ. ಗೂಗಲ್ ಮ್ಯಾಪ್ ಹೊರತಾಗಿ ಅಲ್ಲಿರುವ ಟೂಲ್ ಗಳು ಬಳಕೆದಾರರಿಗೆ ಉತ್ತಮ ಮನರಂಜನೆಗೂ ಕಾರಣವಾಗಿದೆ.