ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಅವರ ಕಚ್ಚಾ ಬಾದಮ್ ಹಾಡು ಇಂಟರ್ನೆಟ್ ನಲ್ಲಿ ಬಿರುಗಾಳಿ ಸೃಷ್ಟಿಸಿದ್ದು ನಿಮಗೆ ಗೊತ್ತೇ ಇದೆ. ಇದೀಗ ಕಲ್ಲಂಗಡಿ ಮಾರಾಟಗಾರ ಗ್ರಾಹಕರನ್ನು ಆಕರ್ಷಿಸಲು ವಿಶಿಷ್ಟವಾಗಿ ಹಾಡಿದ್ದಾನೆ. ಆದರೆ, ಆತ ಗ್ರಾಹಕರನ್ನು ಹೆದರಿಸಲು ಪ್ರಯತ್ನಿಸಿದ್ದಾನೆಯೇ ಅಥವಾ ವ್ಯಾಪಾರಕ್ಕಾಗಿ ಹಾಡಿದ್ದಾನೆಯೇ ಎಂಬುದು ಖಚಿತವಿಲ್ಲ.
ಕಲ್ಲಂಗಡಿ ಮಾರಾಟ ಮಾಡುವ ವ್ಯಾಪಾರಿಯೊಬ್ಬರ ಉಲ್ಲಾಸದ ವಿಧಾನವು ನೆಟ್ಟಿಗರನ್ನು ನಕ್ಕು ನಗಿಸುವಂತೆ ಮಾಡಿದೆ. ವಿಡಿಯೋದಲ್ಲಿ ಮಾರಾಟಗಾರನು ತನ್ನ ಕಾರ್ಟ್ನಲ್ಲಿ ಕಲ್ಲಂಗಡಿಗಳಿಂದ ತುಂಬಿರುವುದನ್ನು ಹಾಗೂ ಆತನ ಪಕ್ಕದಲ್ಲಿ ಕೆಲವು ಮಕ್ಕಳೊಂದಿಗೆ ನಿಂತಿರುವುದನ್ನು ತೋರಿಸುತ್ತದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಮಾರಾಟಗಾರ ದೊಡ್ಡ ಕಲ್ಲಂಗಡಿ ಹಣ್ಣನ್ನು ಅರ್ಧದಷ್ಟು ತುಂಡು ಮಾಡಿ, ಹಣ್ಣನ್ನು ಎರಡು ಭಾಗಗಳನ್ನು ಎತ್ತಿಕೊಂಡು ಭಯಾನಕ ರೀತಿಯಲ್ಲಿ ಕಿರುಚುತ್ತಾನೆ. ನಂತರ ಅವನು ತನ್ನ ಸೊಂಟವನ್ನು ಅಲ್ಲಾಡಿಸಲು ಪ್ರಾರಂಭಿಸುತ್ತಾನೆ. ಕಲ್ಲಂಗಡಿ ಹಿಡಿದುಕೊಂಡು ಲಾಲಂ ಲಾಲ್ ತರ್ಬುಜ್ ಎಂದು ಕೂಗುತ್ತಾನೆ.
ವ್ಯಾಪಾರಿಯ ಹತ್ತಿರ ನಿಂತಿದ್ದವರಿಗೆ ಈತನ ವರ್ತನೆ ಕಂಡು ನಗು ತಡೆಯಲಾಗಲಿಲ್ಲ. ಕಲ್ಲಂಗಡಿ ಮಾರಾಟಗಾರನು ಹಾಡುವುದನ್ನು ಮುಂದುವರಿಸುತ್ತಾನೆ. ಲಾಲ್ ಲಾಲ್ ಲಾಲ್, ಲಾಲಂ ಲಾಲ್ ತರ್ಬೂಜ್ ಎಂದು ಕೂಗಿದ್ದಾನೆ. ಈತನ ಆರ್ಭಟ ಕೇಳಿದ್ರೆ ಖಂಡಿತಾ ನೀವು ಕೂಡ ನಗುತ್ತೀರಾ..!