ಗೋಸುಂಬೆಗಳು ಬಹಳ ಆಕರ್ಷಕವಾಗಿ ಕಾಣಬರುವ ಸರೀಸೃಪಗಳಾಗಿವೆ. ಅವುಗಳು ತಮ್ಮ ಬಣ್ಣವನ್ನು ಬದಲಾಯಿಸಬಲ್ಲವು. ಆಹಾರವನ್ನು ಹಿಡಿಯಲು ಉದ್ದವಾದ ಜಿಗುಟಾದ ನಾಲಿಗೆಯನ್ನು ಕೂಡ ಅವು ಹೊಂದಿರುತ್ತವೆ.
ಹೆಚ್ಚಿನ ಊಸರವಳ್ಳಿಗಳು ಕೀಟಗಳನ್ನು ತಿನ್ನುವ ಮೂಲಕ ಬದುಕುಳಿಯುತ್ತವೆ. ಕೆಲವು ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಮನುಷ್ಯರಿಗೆ ಊಸರವಳ್ಳಿಯ ಕಡಿತವು ಸಾಮಾನ್ಯವಾಗಿ ವಿಷಕಾರಿಯಲ್ಲ. ಇಂತಹ ಗೋಸುಂಬೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಇದೀಗ ಊಸರವಳ್ಳಿಯು ತನ್ನ ನಾಲಿಗೆಯನ್ನು ಬಾಯಿಂದ ಹೊರಹಾಕಿ ಅದರ ಮಾಲೀಕರ ಮೂಗಿಗೆ ಹೊಡೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಂದರವಾದ ಯುವತಿಯು ಬಹುಶಃ ಗೋಸುಂಬೆಯನ್ನು ಸಾಕುತ್ತಿದ್ದಾರೆ ಎಂದೆನಿಸುತ್ತದೆ. ಗೋಸುಂಬೆಯನ್ನು ಅವರು ಕೈಯಲ್ಲಿ ಹಿಡಿದಾಗ ತನ್ನ ಉದ್ದವಾದ ನಾಲಿಗೆಯನ್ನು ರಪ್ ಅಂತಾ ಅವರ ಮೂಗಿನ ಮೇಲೆ ಚಾಚಿ ಹಿಂತೆಗೆದುಕೊಂಡಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಯುವತಿಯು ತನ್ನ ಮುದ್ದಿನ ಊಸರವಳ್ಳಿಯನ್ನು ಹಿಡಿದಿದ್ದಾಳೆ. ಅದು ಆಕೆಯ ಮೂಗು ನೆಕ್ಕಲು ನಾಲಿಗೆಯನ್ನು ಹೊರಹಾಕುತ್ತದೆ. ನಂತರ ಆಕೆ ಅದರ ಜೊತೆ ಆಟವಾಡುತ್ತಾಳೆ. ಟ್ಯಾಂಗ್ಲ್ಡ್ ಚಿತ್ರದ ಹಿನ್ನೆಲೆ ಸಂಗೀತ ವಿಡಿಯೋದಲ್ಲಿ ಪ್ಲೇ ಮಾಡಲಾಗಿದೆ. ಆಕೆಯ ಮುದ್ದಿನ ಗೋಸುಂಬೆಯು ಅನಿಮೇಟೆಡ್ ಸಿನಿಮಾದಂತೆಯೇ ಬಹಳ ಮುದ್ದಾಗಿದೆ. ಈ ಪೋಸ್ಟ್ಗೆ ಇನ್ಸ್ಟಾಗ್ರಾಮ್ನಲ್ಲಿ ಸಾವಿರಾರು ಲೈಕ್ಗಳು ಬಂದಿದ್ದು, ವೈರಲ್ ಆಗಿದೆ.