alex Certify ಮಹಿಳೆಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು ಹೊಲಿಸಿಕೊಳ್ಳುವುದಲ್ಲದೇ ಆಕರ್ಷಕವಾದ ನೆಕ್, ಕುಸುರಿಗಳನ್ನು ಬ್ಲೌಸ್ ಗಳ ಮೇಲೆ ಅರಳಿಸಿ ಸೌಂದರ್ಯವತಿಯಾಗಿ ಕಾಣಲು ಬಯಸುತ್ತಾರೆ.

ಉದ್ದ ತೋಳಿನ ಬ್ಲೌಸ್, ಮುಕ್ಕಾಲು ಭಾಗ ತೋಳಿನ ಬ್ಲೌಸ್ ಗಳು ಈಗ ಮತ್ತೆ ಹೆಂಗಳೆಯರ ಮನಸ್ಸನ್ನು ಆಕರ್ಷಿಸುತ್ತಿವೆ.

ಡೀಪ್ ನೆಕ್, ವಿ ನೆಕ್ ಕೆಲವರಿಗೆ ಇಷ್ಟವಾದರೆ ನೆಕ್ ಗೆ ವಿವಿಧ ವಿನ್ಯಾಸದ ಬಣ್ಣ ಬಣ್ಣದ ಲೇಸ್ ಗಳನ್ನು ಹಚ್ಚಿಸಿಕೊಂಡು ಸಾಧಾರಣ ಬ್ಲೌಸ್ ಗಳನ್ನು ಅತ್ಯಾಕರ್ಷಕವಾಗಿ ಕಾಣುವಂತೆ ಕೆಲವರು ಮಾಡಿಕೊಳ್ಳುತ್ತಾರೆ, ರವಿಕೆಗಳಿಗೆ ಅದೇ ಬಟ್ಟೆಯಿಂದ ದಪ್ಪ ದಾರಗಳನ್ನು ಹೊಲಿದು ಹಿಂಭಾಗದ ನೆಕ್ ಗೆ ಜೋಡಿಸಿ ಎರಡೂ ದಾರಗಳ ಗಂಟನ್ನು  ಮಧ್ಯದಲ್ಲಿ ಹಾಕಲಾಗುತ್ತದೆ. ಈ ಫ್ಯಾಷನ್ ಎಲ್ಲಾ ಹೆಂಗಳೆಯರಿಗೂ ಅಚ್ಚುಮೆಚ್ಚು.

ಒಟ್ಟಿನಲ್ಲಿ ಡಿಸೈನರ್ ಬ್ಲೌಸ್ ಗಳು ಬರಿ ಸಿನಿಮಾ ನಾಯಕಿಯರಿಗಷ್ಟೆ ಅಲ್ಲ, ಇಂದು ಸಾಮಾನ್ಯ ಮಹಿಳೆಯರೂ ಇಷ್ಟಪಟ್ಟು ಧರಿಸುವ ವಸ್ತ್ರವಾಗಿದೆ. ತಮ್ಮ ವ್ಯಕ್ತಿತ್ವಕ್ಕೆ ಸೂಕ್ತವಾದ ಸೀರೆ, ಅದಕ್ಕೆ ಒಪ್ಪುವ ಡಿಸೈನರ್ ಬ್ಲೌಸ್ ಇದ್ದರೆ ಸೀರೆ ತೊಡುವ ಮಹಿಳೆಯ ಅಂದ ದುಪ್ಪಟ್ಟಾಗುತ್ತದೆ, ಎಂಬುದರಲ್ಲಿ ಎರಡು ಮಾತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...