ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು.
* ಹೂಕೋಸು, ಎಲೆಕೋಸುಗಳನ್ನು ಉಪ್ಪು ಮಿಶ್ರಿತ ಬಿಸಿನೀರಿನಲ್ಲಿ ಮುಳುಗಿಸಿಟ್ಟರೆ ಸೇರಿಕೊಂಡಿರುವ ಹುಳುಗಳು ಹೊರಬರುತ್ತವೆ.
* ಬೆಂಡೆಕಾಯಿಗಳನ್ನು ತೊಳೆದು ಕತ್ತರಿಸಿ ಸ್ವಲ್ಪ ಸಮಯ ಬಟ್ಟೆಯ ಮೇಲೆ ಹರಡಿ, ಬಾಡಿಸಿದರೆ ಅಂಟು, ಜಿಗುಟು ಕಡಿಮೆಯಾಗುತ್ತದೆ.
* ಬೆಂಡೆಕಾಯಿ ಹೋಳುಗಳು ಲೋಳೆ ಆಗದಿರಲು ಸ್ವಲ್ಪ ಹುರಿದ ನಂತರ ಹುಣಸೆ ರಸ ಬೆರಸಬೇಕು.
ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ……?
* ಒಂದು ಚಮಚ ಮಜ್ಜಿಗೆ ಹಾಕಿದ ನೀರಿಗೆ ಬದನೆಕಾಯಿ ಹಾಗೂ ಬಾಳೆಕಾಯಿ ಹೋಳುಗಳನ್ನು ಹಾಕಿದರೆ ಕಪ್ಪಾಗುವುದಿಲ್ಲ.
* ಆಲೂಗಡ್ಡೆಗಳನ್ನು ಸ್ವಲ್ಪ ಉಪ್ಪು ನೀರಿನಲ್ಲಿ ನೆನೆಸಿದರೆ ಬೇಗನೇ ಬೇಯುತ್ತವೆ ಹಾಗೂ ಸಿಪ್ಪೆ ಸಲೀಸಾಗಿ ತೆಗೆಯಲು ಬರುತ್ತದೆ.
* ಹಾಗಲಕಾಯಿ ಕಹಿಯನ್ನು ಕಡಿಮೆಯಾಗಿಸಲು ಹೆಚ್ಚಿದ ಹೋಳುಗಳನ್ನು ಅರಿಶಿಣ ಉಪ್ಪನ್ನು ಸೇರಿಸಿದ ನೀರಿನಲ್ಲಿ ನೆನೆಸಿಡಬೇಕು.
* ಹಸಿಮೆಣಸಿನಕಾಯಿಗಳನ್ನು ಎಣ್ಣೆಯಲ್ಲಿ ಹುರಿದು ಉಪ್ಪು ಹಾಗೂ ನಿಂಬೆರಸ ಬೆರೆಸಿ ಅರೆದು ಇರಿಸಿದರೆ, ಪಲ್ಯ ಮಾಡುವಾಗ ಬಳಸಬಹುದು.