ಕೆನಡಾದ ಕ್ವಿಬೆಕ್ ನಗರದಲ್ಲಿ ಕೋವಿಡ್—19ಗೆ ಸಂಬಂಧಿಸಿದ ಪೋರ್ಟಲ್‌ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಘಟನೆ ಸಂಬಂಧ ಅಲ್ಲಿನ ಆರೋಗ್ಯ ಸಚಿವಾಲಯ ಕ್ಷಮೆಯಾಚಿಸಿದೆ.
ಅನುಚಿತವಾದ ವಿಡಿಯೋ ಪ್ರಸಾರವಾಗಿದ್ದಕ್ಕೆ ಕ್ಷಮೆ ಇರಲಿ ಅಂತಾ ಟ್ವೀಟ್ ಮಾಡಿದೆ. ಕ್ವಿಬೆಕ್‌ನ COVID-19 ಪೋರ್ಟಲ್‌ಗೆ ಬಳಕೆದಾರರನ್ನು ಲಿಂಕ್ ಮಾಡಲು ಇರುವ ಪ್ಲಾಟ್‌ಫಾರ್ಮ್ ಅದಾಗಿತ್ತು. ಆದ್ರೆ ಪೋರ್ಟಲ್‌ನಲ್ಲಿ ಪೋರ್ನ್ ಪ್ರಕಟವಾಗಿತ್ತು.
ಈ ರೀತಿ ಆಗಿದ್ಹೇಗೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಹಿಂದಿನ ಕಾರಣಗಳನ್ನು ಹುಡುಕುತ್ತಿದ್ದೇವೆ. ಅನಾನುಕೂಲತೆಗಾಗಿ ಕ್ಷಮಿಸಿ ಅಂತ ಸಚಿವಾಲಯ ಕೇಳಿಕೊಂಡಿದೆ.
ಈ ಪೋರ್ನ್ ಹಬ್ ಮೊಂಟ್ರಿಯಲ್‌ನಲ್ಲಿದೆ. ಕೆನಡಾದ ಪೋರ್ನೋಗ್ರಫಿ ಸಂಸ್ಥೆ ಮೈಂಡ್‌ಗೀಕ್ ಮಾಲೀಕತ್ವದ ಹಬ್ ಇದು. 2021ರಲ್ಲಿ, ಮೈಂಡ್‌ಗೀಕ್ ವಿರುದ್ಧ ಡಜನ್‌ಗಟ್ಟಲೆ ಮಹಿಳೆಯರು ಮಹಿಳೆಯರು ಮೊಕದ್ದಮೆ ಹೂಡಿದ್ದರು. ಲೈಂಗಿಕ ಶೋಷಣೆಯ ಮೂಲಕ ಈ ಸಂಸ್ಥೆ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.