ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರ. ಹಾಗಂತ ಮೊಬೈಲ್ ಬಳಕೆ ನಿಲ್ಲಿಸೋದು ಅಸಾಧ್ಯವಾದ ಮಾತು. ಮೊಬೈಲ್ ಇತಿಮಿತಿಯಾಗಿ ಬಳಸಿ ಎನ್ನುವ ಜೊತೆಗೆ ತಜ್ಞರು, ಪ್ರಕಾಶಮಾನವಾದ ಸ್ಕ್ರೀನ್ ಬಳಕೆ ಮಾಡಬೇಡಿ ಎಂದು ಸಲಹೆ ನೀಡ್ತಾರೆ.
ಬಹುತೇಕರು ಸ್ಪಷ್ಟವಾಗಿ ಕಾಣಲಿ ಎನ್ನುವ ಕಾರಣಕ್ಕೆ ಮೊಬೈಲ್ ಸ್ಕ್ರೀನ್ ಬೆಳಕನ್ನು ಹೆಚ್ಚಿಗೆ ಇಟ್ಟುಕೊಂಡಿರ್ತಾರೆ. ನೀವೂ ಬ್ರೈಟ್ ಸ್ಕ್ರೀನ್ ಬಳಕೆ ಮಾಡ್ತಿದ್ದರೆ ಇಂದಿನಿಂದಲೇ ಬ್ರೈಟ್ನೆಸ್ ಕಡಿಮೆ ಮಾಡಿಕೊಳ್ಳಿ. ಬ್ರೈಟ್ ಸ್ಕ್ರೀನ್ ಕಣ್ಣಿಗೆ ಹಾನಿಕಾರಕ. ಕುರುಡುತನಕ್ಕೆ ಕಾರಣವಾಗುತ್ತದೆ.
ʼರಾಜೀನಾಮೆʼ ಬಳಿಕ ರೈಲಿನಲ್ಲಿ ಶಿವಮೊಗ್ಗಕ್ಕೆ ಈಶ್ವರಪ್ಪ ವಾಪಾಸ್
ವರ್ಷಗಳ ಕಾಲ ಬ್ರೈಟ್ ಸ್ಕ್ರೀನ್ ನಲ್ಲಿ ಮೊಬೈಲ್ ನೋಡ್ತಿದ್ದ 25 ವರ್ಷದ ಮಹಿಳೆ ಕಣ್ಣಿನ ಕಾರ್ನಿಯಾದಲ್ಲಿ ತೂತುಗಳು ಕಾಣಿಸಿಕೊಂಡಿದ್ದವು. ಇದಕ್ಕೆ ಆಕೆ ಬ್ರೈಟ್ನೆಸ್ ಮೊಬೈಲ್ ಸ್ಕ್ರೀನ್ ಕಾರಣವೆಂದು ವೈದ್ಯರು ಹೇಳಿದ್ದರು. ಚೆನ್ ಹೆಸರಿನ ಮಹಿಳೆಗೆ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೋರಿಸಿದಾಗ ಆಘಾತಕಾರಿ ಸಂಗತಿ ಗೊತ್ತಾಯ್ತು.