ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಮುಂದಿನ ಶೈಕ್ಷಣಿಕ ವರ್ಷದಿಂದ ಒಂದೇ ಬೋರ್ಡ್ ಎಕ್ಸಾಂ ನಡೆಸಲು ನಿರ್ಧರಿಸಲಾಗಿದೆ. ಕೋವಿಡ್ ದಾಳಿಗೆ ಮುನ್ನ ಇದ್ದ ಏಕ ಪರೀಕ್ಷಾ ಸ್ವರೂಪ ಪುನರ್ ಸ್ಥಾಪಿಸಲು ಬೋರ್ಡ್ ಬಯಸಿದೆ.
ಹೀಗಾಗಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕ್ಲಾಸ್ 10 ಮತ್ತು 12ರ ಬೋರ್ಡ್ ಪರೀಕ್ಷೆಗಳನ್ನು ಎರಡು ಭಾಗಗಳಾಗಿ ವಿಭಜಿಸುವ ಸಾಧ್ಯತೆಯಿಲ್ಲ. ಕಳೆದ ವರ್ಷ ನವೆಂಬರ್-ಡಿಸೆಂಬರ್ನಲ್ಲಿ ಟರ್ಮ್-1 ಬೋರ್ಡ್ ಪರೀಕ್ಷೆಗಳು ನಡೆದಿದ್ದು, ಟರ್ಮ್-2 ಪರೀಕ್ಷೆಗಳು ಏಪ್ರಿಲ್ 26 ರಂದು ಪ್ರಾರಂಭವಾಗಲಿವೆ ಎಂದು ತಿಳಿದುಬಂದಿದೆ.
ಪ್ರಾಣಿಗಳಿಗಿಂತ ಮನುಷ್ಯರ ಆಯಸ್ಸು ಹೆಚ್ಚಾಗಿರುವುದೇಕೆ….? ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ
ಕೋವಿಡ್ ಕಾರಣಕ್ಕೆ ಹಿಂದಿನ ವರ್ಷದಲ್ಲಿ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳು ಮತ್ತು ಆಂತರಿಕ ಮೌಲ್ಯಮಾಪನಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ ಮೌಲ್ಯಮಾಪನ ಮಾಡಲಾಯಿತು.
ಶಾಲೆಗಳ ಅಭಿಪ್ರಾಯ ಕಲೆಹಾಕಿದ ಬಳಿಕ ವರ್ಷಕ್ಕೊಂದೇ ಏಕ-ಪರೀಕ್ಷೆಯ ಮಾದರಿಯನ್ನು ಮರುಸ್ಥಾಪಿಸಲು ಮಂಡಳಿಯು ನಿರ್ಧರಿಸಿದೆ.
ಈಗ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಒಂದು ಬಾರಿ ಪರೀಕ್ಷೆಯ ಸ್ವರೂಪಕ್ಕೆ ಸೂಕ್ತ ಎಂಬ ನಿರ್ಧಾರವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.