ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಸಚಿವ ಈಶ್ವರಪ್ಪ ತಮಗೆ ಸಂತೋಷ್ ಪಾಟೀಲ್ ಯಾರೆಂದು ತಿಳಿದಿಲ್ಲ ಆತನ ಮುಖವನ್ನು ನಾನು ನೋಡಿಲ್ಲ ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನ್ನೊಳ್ಕರ್ ನಾನು ಮತ್ತು ಸಂತೋಷ್ ಬೈಲಹೊಂಗಲದ ಸ್ವಾಮೀಜಿ ಅವರ ಜೊತೆ ಈಶ್ವರಪ್ಪ ಅವರನ್ನು ಎರಡು ಬಾರಿ ಭೇಟಿಯಾಗಿದ್ದೆವು ಎಂದು ತಿಳಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೈಲಹೊಂಗಲ ಸ್ವಾಮೀಜಿ ವೇದಮೂರ್ತಿ ಮಹಾಂತಯ್ಯ ಆರಾದಿಮಠ ಸಂತೋಷ್ ಗೂ ನನಗೂ ಯಾವುದೇ ಸಂಬಂಧವಿಲ್ಲ. 2021ರಲ್ಲಿ ಹಿಂಡಲಗಾ ಗ್ರಾಮಕ್ಕೆ ಜಾತ್ರೆಗೆಂದು ತೆರಳಿದ್ದಾಗ ಈಶ್ವರಪ್ಪನವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಸಂತೋಷ್ ಅವರೇ ನನ್ನನ್ನು ಗುರುತಿಸಿ ನೀವು ಬೈಲಹೊಂಗಲದ ಸ್ವಾಮೀಜಿಯಲ್ಲವ ನಾವಿಬ್ಬರೂ ಫೋಟೋ ತೆಗೆಸಿಕೊಳ್ಳುವ ಎಂದು ಹೇಳಿದ್ದರು. ಫೋಟೋ ತೆಗೆಸಿಕೊಂಡಿದ್ದರು. ಇದರ ಹೊರತು ನಮ್ಮಿಬ್ಬರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.