alex Certify ʼಪ್ರಧಾನಮಂತ್ರಿ ಸಂಗ್ರಹಾಲಯʼ ಉದ್ಘಾಟಿಸಿ ಮೊದಲ ಟಿಕೆಟ್​ ಖರೀದಿಸಿದ ಪ್ರಧಾನಿ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪ್ರಧಾನಮಂತ್ರಿ ಸಂಗ್ರಹಾಲಯʼ ಉದ್ಘಾಟಿಸಿ ಮೊದಲ ಟಿಕೆಟ್​ ಖರೀದಿಸಿದ ಪ್ರಧಾನಿ ಮೋದಿ

PM Narendra Modi inaugurates Pradhanmantri Sangrahalaya, buys first ticket - Key pointsಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಯಲ್ಲಿ ʼಪ್ರಧಾನಮಂತ್ರಿ ಸಂಗ್ರಹಾಲಯʼವನ್ನು ಉದ್ಘಾಟಿಸಿದ್ದಾರೆ. ಈ ಪ್ರಧಾನಮಂತ್ರಿ ಸಂಗ್ರಹಾಲಯವು ದೇಶ ಕಂಡ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಈ ಮ್ಯೂಸಿಯಂಗೆ ಮೊದಲ ಟಿಕೆಟ್​ ಖರೀದಿಸಿದ ವ್ಯಕ್ತಿ ಪ್ರಧಾನಿ ಮೋದಿ ಎನಿಸಿದ್ದಾರೆ.

ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಪ್ರವೇಶಿಸಲು ಆನ್​ಲೈನ್​​ನಲ್ಲಿ ಖರೀದಿ ಮಾಡುವ ಟಿಕೆಟ್​ ದರವು 100 ರೂಪಾಯಿ ಆಗಿದೆ. ಆಫ್​ಲೈನ್​ನಲ್ಲಿ 110 ರೂಪಾಯಿ ನೀಡಿ ಟಿಕೆಟ್​ ಖರೀದಿಸಬಹುದು. ವಿದೇಶಿಗರು 750 ರೂಪಾಯಿ ನೀಡಿ ಟಿಕೆಟ್​ ಖರೀದಿಸಬೇಕು. 5 ರಿಂದ 12 ವರ್ಷದೊಳಗಿನ ಮಕ್ಕಳ ಆನ್​ಲೈನ್​ ಅಥವಾ ಆಫ್​ಲೈನ್​ ಟಿಕೆಟ್​ ಖರೀದಿಗೆ 50 ಪ್ರತಿಶತ ರಿಯಾಯಿತಿ ಸಿಗಲಿದೆ.

“ಪ್ರಧಾನಮಂತ್ರಿ ಸಂಗ್ರಹಾಲಯ”ಕ್ಕೆ ಹತ್ತಿರದ ಮೆಟ್ರೋ ನಿಲ್ದಾಣವು ಹಳದಿ ಮಾರ್ಗದಲ್ಲಿರುವ ಲೋಕ್ ಕಲ್ಯಾಣ್ ಮಾರ್ಗವಾಗಿದೆ. ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಂದ ಬುಕಿಂಗ್‌ನಲ್ಲಿ ಶೇಕಡಾ 25 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ.

ಸಂಗ್ರಹಾಲಯವು ಪಿಎಂ ಮೋದಿ ನೇತೃತ್ವದ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನವಾಗಿದೆ, ಇದು ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಸಂವೇದನಾಶೀಲಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಪಿಎಂಒ ಮಾಹಿತಿ ನೀಡಿದೆ.

ಈ ಸಂಗ್ರಹಾಲಯವು 10 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದ್ದು, ನೆಹರು ಮೆಮೋರಿಯಲ್‌ ಮ್ಯೂಸಿಯಂ ಪಕ್ಕದಲ್ಲಿದ್ದು, ತೀನ್‌ ಮೂರ್ತಿ ಭವನದಲ್ಲಿರುವ ಲೈಬ್ರರಿಯೂ ಸನಿಹದಲ್ಲಿದೆ.

ಈ ಕಟ್ಟಡ ನಿರ್ಮಾಣಕ್ಕೆ 2018 ರಲ್ಲಿ ಶಂಕುಸ್ಥಾನನೆ ನೆರವೇರಿಸಲಾಗಿದ್ದು, ಸುಮಾರು 271 ಕೋಟಿ ರೂಪಾಯಿ‌ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಒಟ್ಟು 43 ಗ್ಯಾಲರಿಗಳಿವೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್ ಜನ್ಮದಿನದಂದೇ ಈ ಸಂಗ್ರಹಾಲಯ ಉದ್ಘಾಟನೆಯಾಗಿರುವುದು ವಿಶೇಷ.

— ANI (@ANI) April 14, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...