ಕಳೆದ ಕೆಲವು ವರ್ಷಗಳಿಂದೀಚೆಗೆ ಮದುವೆಯ ರೀತಿ ರಿವಾಜುಗಳಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ. ಕೆಲವರು ಸರಳವಾಗಿ ಹೊಸ ಬದುಕಿಗೆ ಕಾಲಿಟ್ಟರೆ, ಇನ್ನು ಕೆಲವರು ಅದ್ಧೂರಿಯಾಗಿ ಹಸೆಮಣೆ ಏರ್ತಾರೆ. ಮದುವೆಯಲ್ಲಿ ಅನೇಕ ಸಂಪ್ರದಾಯಗಳಿರುತ್ತವೆ.
ವಧುವಿನ ಹಣೆ ಮೇಲೆ ವರ ಸಿಂಧೂರ ಇಡುವ ಸಂಪ್ರದಾಯ ಕೂಡ ಇವುಗಳಲ್ಲೊಂದು. ವಧು, ವರನ ಹಣೆಗೆ ಸಿಂಧೂರ ಇಡುವ ಪದ್ಧತಿ ಎಲ್ಲಿಯೂ ಇಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಮದುವೆಯ ಸಂದರ್ಭದಲ್ಲಿ ವಧು, ವರನ ಹಣೆಗೆ ಸಿಂಧೂರ ಇಡಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾವಿ ಪತಿಯೇ ಈ ಬೇಡಿಕೆ ಇಟ್ಟಿದ್ದನಂತೆ.
ಹಾಗಾಗಿ ಹಳೆಯ ಪದ್ಧತಿಗಳನ್ನು ಬಿಟ್ಟು, ವಧು ಆತನಿಗೆ ಸಿಂಧೂರ ಇಟ್ಟಿದ್ದಾಳೆ. ಮೊದಲು ವರ, ವಧುವಿನ ಹಣೆಗೆ ಸಿಂಧೂರ ಇಟ್ಟಿದ್ದ. ಟ್ವಿಟರ್ನಲ್ಲಿ ಹರಿದಾಡ್ತಿರೋ ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ವಧು ತನ್ನ ಮದುವೆಯಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಹೇಳಿದ್ದಾಳೆ. ಮದುವೆಯನ್ನು ಪ್ರಗತಿಪರವಾಗಿರಿಸಿಕೊಳ್ಳಬೇಕೆಂದು ತನ್ನ ಆಸೆ ಹಾಗೂ ಸಂಪ್ರದಾಯಗಳಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾಳೆ.