ಸಂಗಾತಿ ಜೊತೆ ವಿಶೇಷ ಪ್ರಯೋಗಕ್ಕೆ ಮುಂದಾಗಿದ್ದರೆ ಇದನ್ನೊಮ್ಮೆ ಓದಿ. ಸೆಕ್ಸ್ ಲೈಫ್ ನಲ್ಲಿ ಬದಲಾವಣೆ ಇಲ್ಲದೆ ಹೋದ್ರೆ ಜೀವನ ಬೋರಾಗಲು ಶುರುವಾಗುತ್ತದೆ. ಸೆಕ್ಸ್ ನಲ್ಲಿ ಹೊಸ ಪ್ರಯೋಗ ನಡೆದಾಗಲೇ ಸಂಗಾತಿಗಳು ಮತ್ತಷ್ಟು ಹತ್ತಿರವಾಗಲು ಸಾಧ್ಯ.
ಸುಖಕರ ಸೆಕ್ಸ್ ಹಾಗೂ ರೋಮ್ಯಾನ್ಸ್ ಗಾಗಿ ಇಲ್ಲಿದೆ ಕೆಲ ಟಿಪ್ಸ್.
ಶ್ರೀಗಂಧದ ತೈಲ : ಶ್ರೀಗಂಧದ ತೈಲ ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಶಕ್ತಿ ಹೊಂದಿದೆ. ಒತ್ತಡ ಕಡಿಮೆ ಮಾಡಿ ಸೆಕ್ಸ್ ಉತ್ತೇಜನಕ್ಕೆ ಇದು ದಾರಿ ಮಾಡಿಕೊಡುತ್ತದೆ. ಕಿವಿ ಹಿಂಭಾಗಕ್ಕೆ ಒಂದೆರಡು ಹನಿ ಶ್ರೀಗಂಧದ ತೈಲ ಹಾಕಿಕೊಂಡು ಸಂಗಾತಿಯನ್ನು ನಿಮ್ಮತ್ತ ಸೆಳೆಯಿರಿ.
ರೋಸ್ ಆಯಿಲ್ : ಸೆಂಟ್ ವಿಚಾರ ಬಂದಾಗ ಮೊದಲ ಸ್ಥಾನ ಗುಲಾಬಿಗೆ ಹೋಗುತ್ತದೆ. ರೋಮ್ಯಾನ್ಸ್ ವಿಚಾರದಲ್ಲೂ ರೋಸ್ ಜನರ ಮೊದಲ ಆಯ್ಕೆ. ಗುಲಾಬಿ ವಾಸನೆ ಕೆಲ ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುತ್ತದೆ.
ಮಲ್ಲಿಗೆ : ರೋಮ್ಯಾನ್ಸ್ ಗೆ ಇನ್ನೊಂದು ಹೆಸರು ಮಲ್ಲಿಗೆ. ಸೆಕ್ಸ್ ಗೂ ಮುನ್ನ ಮಲ್ಲಿಗೆ ವಾಸನೆ ಸಂಗಾತಿಯನ್ನು ಆಕರ್ಷಿಸಲಿದೆ. ಮೊದಲಿಗಿಂತ ಉತ್ತಮ ಅನುಭವವನ್ನು ಇದು ನೀಡಲಿದೆ.
ವೆನಿಲ್ಲಾ : ಇದ್ರ ವಾಸನೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ರಾತ್ರಿ ಸಂಗಾತಿ ಜೊತೆ ಸುಂದರ ಕ್ಷಣ ಕಳೆಯಬೇಕೆಂದ್ರೆ ವೆನಿಲ್ಲಾ ಸುಗಂಧ ಬೆಸ್ಟ್.