ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ 9 ವರ್ಷದ ಬಾಲಕಿಯು ಈಗ ವಿಶ್ವದ ಗಮನ ಸೆಳೆದಿದ್ದಾಳೆ. ಆಕೆ ತನ್ನ ತಾಯಿಗೆ ಪತ್ರ ಬರೆದಿದ್ದು, “ಸ್ವರ್ಗದಲ್ಲಿ ಭೇಟಿಯಾಗೋಣ” ಎಂಬ ಪತ್ರದಲ್ಲಿನ ಸಾಲು ಹೃದಯ ತಟ್ಟುವಂತಿದೆ.
ಇನ್ಸ್ಟಿಟ್ಯೂಟ್ ಆಫ್ ದಿ ಫ್ಯೂಚರ್ನ್ ಸಂಸ್ಥಾಪಕರು ಇತ್ತೀಚೆಗೆ ಮಗುವಿನ ಕೈಬರಹದ ಪತ್ರದ ಚಿತ್ರವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಚೋಲೆ ಭತೂರೆ ಮಿಸ್ ಮಾಡಿಕೊಂಡ ಕೊಹ್ಲಿ
“ಮಾಮ್ ! ನೀನು ಇಡೀ ವಿಶ್ವದಲ್ಲೇ ಬೆಸ್ಟ್ ಮಾಮ್. ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ. ನೀನು ಸ್ವರ್ಗಕ್ಕೆ ಹೋಗಬೇಕೆಂದು ಬಯಸುತ್ತೇನೆ
ಮತ್ತು ಅಲ್ಲಿ ಸಂತೋಷವಾಗಿರಿ. ನಾನು ಒಳ್ಳೆಯ ವ್ಯಕ್ತಿಯಾಗಿ ಸ್ವರ್ಗಕ್ಕೆ ಬರಲು ಕೈಲಾದಷ್ಟು ಪ್ರಯತ್ನಿಸುತ್ತೇನೆ. ನಿಮ್ಮನ್ನು ಸ್ವರ್ಗದಲ್ಲಿ ನೋಡುತ್ತೇನೆ ! ಗಲಿಯಾ” ಎಂದು ಪತ್ರದಲ್ಲಿ ಸಾಲುಗಳಿವೆ.
ಹುಡುಗಿಯ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾವನಾತ್ಮಕ ಕಾಮೆಂಟ್ ಮಾಡುತ್ತಿದ್ದಾರೆ. ಆಕೆ ಅನುಭವಿಸುತ್ತಿರುವ ನೋವನ್ನು ನಾನು ಊಹಿಸಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಾರ್ಚ್ 8 ರಂದು ಆಂಟನ್ ಗೆರಾಶ್ಚೆಂಕೊ ಅವರು ಮೊದಲು ಇದನ್ನು ಹಂಚಿಕೊಂಡಿದ್ದಾರೆ.