ಬ್ರೇಕಪ್ ಅನ್ನೋದು ಈಗ ಕಾಮನ್. ಹಾಗಂತ ಪ್ರೀತಿ ಮುರಿದು ಬಿದ್ದ ಮೇಲೆ ಮನಸ್ಸಿಗೆ ನೋವಾಗದೇ ಇರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಯಾವ ಕೆಲಸದಲ್ಲೂ ಮನಸ್ಸು ಇರುವುದಿಲ್ಲ. ಬ್ರೇಕಪ್ ಆಗಿದೆ ಅನ್ನೋ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.
ಅನೇಕರು ಪ್ರೇಮ ವೈಫಲ್ಯದ ಬಳಿಕ ತುಂಬಾ ಕೋಪ ಮಾಡಿಕೊಳ್ತಾರೆ. ಸೇಡು ತೀರಿಸಿಕೊಳ್ಳಲು ಯೋಚಿಸುತ್ತಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಬ್ರೇಕಪ್ ಖಿನ್ನತೆಗೂ ಕಾರಣವಾಗುತ್ತದೆ. ಬ್ರೇಕಪ್ ಆದ ನಂತರ ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ದ್ವೇಷಮಯ ಆಲೋಚನೆಗಳಿಂದ ದೂರವಿರಿ.
ಮೊದಲನೆಯದಾಗಿ, ನಿಮ್ಮ ಮನಸ್ಸನ್ನು ಪ್ರೇರೇಪಿಸಲು ಪ್ರಯತ್ನಿಸಿ. ಯಾಕೆಂದರೆ ನಡೆದದ್ದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ಮುಂದೇನು ಎಂಬುದರ ಬಗ್ಗೆ ಮಾತ್ರ ಯೋಚಿಸಿ. ಬ್ರೇಕಪ್ ಬಳಿಕ ನಿಮ್ಮ ಕೆಲಸದ ಕಡೆ ಹೆಚ್ಚು ಗಮನ ಹರಿಸಿ. ಯಾಕೆಂದರೆ ಭವಿಷ್ಯದಲ್ಲಿ ನೀವು ಚೆನ್ನಾಗಿರಬೇಕೆಂದರೆ ವೃತ್ತಿಯತ್ತ ಹೆಚ್ಚು ಗಮನ ಹರಿಸಲೇಬೇಕು.
ಬ್ರೇಕಪ್ ಆದಾಗ ಈ ಪ್ರಪಂಚದಿಂದ್ಲೇ ದೂರ ಹೋಗಬೆಕೆಂದು ನಿಮಗೆ ಅನಿಸಬಹುದು. ಆದ್ರೆ ನೀವು ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕು. ಯಾವಾಗಲೂ ಧನಾತ್ಮಕವಾಗಿರಲು ಪ್ರಯತ್ನಿಸಬೇಕು. ಸಾಮಾನ್ಯವಾಗಿ ಬ್ರೇಕಪ್ ಬಳಿಕ ಸ್ನೇಹಿತರು ಮತ್ತು ಸಂಬಂಧಿಕರಿಂದ ದೂರವಿರುತ್ತೀರಿ. ಒಬ್ಬಂಟಿಯಾಗಿರಲು ಇಷ್ಟಪಡುತ್ತೀರಿ. ಆದ್ರೆ ಆ ರೀತಿ ಮಾಡದೇ ಇರುವುದು ಉತ್ತಮ. ಒಂಟಿಯಾಗಿದ್ದರೆ ನೀವು ಖಿನ್ನತೆಗೆ ಒಳಗಾಗುತ್ತೀರಿ.
ಬ್ರೇಕಪ್ ಆಯ್ತು ಅಂದ್ರೆ ಪ್ರೇಮಿಗಳು ಎಲ್ಲವನ್ನೂ ಮರೆತು ಆಲೋಚನೆಗಳಲ್ಲಿ ಮುಳುಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಇಷ್ಟಪಡುವ ಎಲ್ಲಾ ಕೆಲಸಗಳನ್ನು ನೀವು ಮಾಡಬೇಕು. ಏಕೆಂದರೆ ನಿಮ್ಮ ನೆಚ್ಚಿನ ಕೆಲಸವನ್ನು ನೀವು ಮಾಡಿದರೆ ತುಂಬಾ ಸಂತೋಷವಾಗಿರುತ್ತೀರಿ.