ಲಡಾಖ್ ಸರೋವರದಲ್ಲಿ ಪ್ರವಾಸಿಗರ ದುರ್ವರ್ತನೆಗೆ ನೆಟ್ಟಿಗರು ಕೆಂಡ 12-04-2022 10:56AM IST / No Comments / Posted In: Latest News, India, Live News, Tourism ಭಾರತವು ಹಲವಾರು ಸುಂದರವಾದ ಪ್ರವಾಸಿ ತಾಣಗಳ ನೆಲೆಯಾಗಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಾರೆ. ಪ್ರವಾಸಿಗರಾಗಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು. ಹಾಗೂ ಸ್ಥಳದ ಪವಿತ್ರತೆಯನ್ನು ಕಾಪಾಡಿಕೊಳ್ಳಲು ನಾವು ನಮ್ಮ ಕರ್ತವ್ಯವನ್ನು ಅರಿತುಕೊಳ್ಳಬೇಕು. ಆದರೆ, ಪ್ರವಾಸಿಗರು ಅದನ್ನು ಮರೆತು ಬೇಜವಾಬ್ದಾರಿ ವರ್ತನೆ ತೋರುತ್ತಾರೆ. ಇದೀಗ ಇಂಥದ್ದೇ ವಿಡಿಯೋ ಲಡಾಖ್‌ನಲ್ಲಿ ಕಾಣಿಸಿಕೊಂಡಿದೆ. ಮೂವರು ಪ್ರವಾಸಿಗರು ತಮ್ಮ ಕಾರನ್ನು ಪ್ರಾಚೀನ ಪ್ಯಾಂಗಾಂಗ್ ಸರೋವರದಲ್ಲಿ ಓಡಿಸಿದ್ದಾರೆ. ಜಿಗ್ಮತ್ ಲಡಾಖಿ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಸರೋವರದಲ್ಲಿ ಎಸ್‌ಯುವಿ ಚಾಲನೆ ಮಾಡುತ್ತಿದ್ದರೆ, ಮತ್ತಿಬ್ಬರು ವ್ಯಕ್ತಿಗಳು ರೂಫ್‌ನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಸರೋವರದಲ್ಲಿ ಕುರ್ಚಿ ಮತ್ತು ಟೇಬಲ್ ಗಳನ್ನು ಸಹ ಇಡಲಾಗಿದೆ. ಅದರಲ್ಲಿ ಹಲವಾರು ಮದ್ಯದ ಬಾಟಲಿಗಳು, ನೀರು ಮತ್ತು ಚಿಪ್ಸ್ ಪ್ಯಾಕೆಟ್‌ಗಳನ್ನು ಹರಡಲಾಗಿದೆ. ವಿಡಿಯೋ ಹಂಚಿಕೊಂಡ ಜಿಗ್ಮತ್ ಲಡಾಖಿ, ತಾನು ನಾಚಿಕೆಗೇಡಿನ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ಬೇಜವಾಬ್ದಾರಿ ಪ್ರವಾಸಿಗರು ಲಡಾಖ್ ಅನ್ನು ಕೊಲ್ಲುತ್ತಿದ್ದಾರೆ. ನಿಮಗೆ ಗೊತ್ತೆ? ಲಡಾಖ್ 350ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿದೆ ಮತ್ತು ಪ್ಯಾಂಗೊಂಗ್‌ನಂತಹ ಸರೋವರಗಳು ಅನೇಕ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಇಂತಹ ಕೃತ್ಯವು ಅನೇಕ ಪಕ್ಷಿ ಪ್ರಭೇದಗಳ ಆವಾಸಸ್ಥಾನವನ್ನು ಅಪಾಯಕ್ಕೆ ತರುತ್ತದೆ ಎಂದು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಕೆರಳಿಸಿದೆ. ಪ್ರವಾಸಿಗರ ಅಸಡ್ಡೆ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. I am sharing again an another shameful video . Such irresponsible tourists are killing ladakh . Do you know? Ladakh have a more than 350 birds species and lakes like pangong are the home of many bird species. Such act may have risked the habitat of many bird species. pic.twitter.com/ZuSExXovjp — Jigmat Ladakhi 🇮🇳 (@nontsay) April 9, 2022