ನಮ್ಮಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಇನ್ಸ್ಟಾಗ್ರಾಂನಲ್ಲಿ ಹಲವಾರು ಮಂದಿ ತಮ್ಮ ಡಾನ್ಸ್ ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳ ಚಮತ್ಕಾರಿ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸಿದೆ.
ಹೆಣ್ಣಿಗೆ ಸೀರೆ ಏಕೆ ಅಂದ ಎಂಬ ಹಾಡಿದೆ. ಹಾಗೆಯೇ ಸೀರೆಯುಟ್ಟು ಕೆಲವರು ನಡೆಯೋಕೆ ಕಷ್ಟ ಪಡುತ್ತಾರೆ, ಅಂಥಾದ್ರಲ್ಲಿ ಬ್ಯಾಕ್‌ಫ್ಲಿಪ್ ಮಾಡಲು ಸಾಧ್ಯವಾ..? ಆದ್ರೆ, ಇಲ್ಲೊಬ್ಬಳು ಯುವತಿ ಸೀರೆಯುಟ್ಟು ಪಲ್ಟಿ ಹೊಡೆಯುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾಳೆ.
ಮಿಲಿ ಸರ್ಕಾರ್ ಎಂದು ಗುರುತಿಸಲಾದ ಯುವತಿಯೊಬ್ಬಳು ಬಿಳಿ ಬಣ್ಣದ ಸೀರೆಯಲ್ಲಿ ಅನಾಯಾಸವಾಗಿ ಸಾಹಸ ಪ್ರದರ್ಶಿಸಿದ್ದಾಳೆ. ಪಶ್ಚಿಮ ಬಂಗಾಳದ ರಾಯ್‌ಗಂಜ್ ಮೂಲದ ಮಿಲಿ ಸರ್ಕಾರ್, ಅಂತಾರಾಷ್ಟ್ರೀಯ ಯೋಗ ಚಿನ್ನದ ಪದಕ ವಿಜೇತೆ ಮತ್ತು ವೃತ್ತಿಪರ ನೃತ್ಯಗಾರ್ತಿ ಹಾಗೂ ಜಿಮ್ನಾಸ್ಟ್ ಕೂಡ ಆಗಿದ್ದಾರೆ. ವಿಡಿಯೋದಲ್ಲಿ, ಆಕೆ ಬಿಳಿ ಬಣ್ಣದ ಸೀರೆಯನ್ನುಟ್ಟು ಬ್ಯಾಕ್‌ಫ್ಲಿಪ್ ಅನ್ನು ಅತ್ಯಂತ ಸುಲಭವಾಗಿ ಮಾಡುತ್ತಾರೆ. ನಂತರ ಆಶಾ ಭೋಂಸ್ಲೆಯವರ ಮುಜೆ ನೌಲಾಖಾ ಮಂಗಾವಾ ದೇ ರೇ ಹಾಡಿಗೆ ಅದ್ಭುತವಾಗಿ ಕುಣಿದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾವಿರಾರು ವೀಕ್ಷಣೆಯೊಂದಿಗೆ ವೈರಲ್ ಆಗಿದೆ. ಕಾಮೆಂಟ್ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.
https://www.youtube.com/watch?v=-gWR3weQFxw