alex Certify ಅಪ್ರಾಪ್ತೆಗೆ ಅತ್ಯಾಚಾರ ಹಾಗೂ ಅದರ ಪರಿಣಾಮಗಳ ಬಗ್ಗೆ ಮೊದಲೇ ಅರಿವಿತ್ತು: ಆರೋಪಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌ ಪೀಠದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆಗೆ ಅತ್ಯಾಚಾರ ಹಾಗೂ ಅದರ ಪರಿಣಾಮಗಳ ಬಗ್ಗೆ ಮೊದಲೇ ಅರಿವಿತ್ತು: ಆರೋಪಿಗೆ ಜಾಮೀನು ಮಂಜೂರು ಮಾಡಿದ ಬಾಂಬೆ ಹೈಕೋರ್ಟ್‌ ಪೀಠದ ಹೇಳಿಕೆ

ತನ್ನ ಸ್ನೇಹಿತನ ಅಪ್ರಾಪ್ತ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಅಡಿಯಲ್ಲಿ ಕೊಲ್ಹಾಪುರದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ನೀಡುವ ವೇಳೆಯಲ್ಲಿ ಸಂತ್ರಸ್ತ ಬಾಲಕಿಯು 16 ವರ್ಷ 6 ತಿಂಗಳ ಪ್ರಾಯದವಳಾಗಿದ್ದು ಈಕೆಗೆ ಅತ್ಯಾಚಾರ ಹಾಗೂ ಅದರ ಪರಿಣಾಮಗಳ ಬಗ್ಗೆ ಮೊದಲೇ ಅರಿವಿತ್ತು ಎಂದು ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಸಿ.ವಿ. ಭಡಾಂಗ್​ ನೇತೃತ್ವದ ಪೀಠವು ಆರೋಪಿಯು ಸಂತ್ರಸ್ತೆಯ ಜೊತೆಯಲ್ಲಿ ಬಲವಂತದಿಂದ ಲೈಂಗಿಕ ಸಂಪರ್ಕ ಹೊಂದಿರಲಿಲ್ಲ. ಅಲ್ಲದೇ ಈ ಕೃತ್ಯ ಎಸಗುವ ವೇಳೆಯಲ್ಲಿ ಆರೋಪಿಯು ಕಾಂಡೋಮ್​ ಧರಿಸಿದ್ದ ಎಂದು ಹೇಳಿದೆ.

ಈ ಪ್ರಕರಣದ ತನಿಖೆಯು ಪೂರ್ಣಗೊಂಡಿದೆ ಹಾಗೂ ಚಾರ್ಜ್​ ಶೀಟ್​ ಕೂಡ ಸಲ್ಲಿಸಲಾಗಿದೆ ಎಂದು ಜಾಮೀನು ನೀಡುವ ವೇಳೆಯಲ್ಲಿ ನ್ಯಾಯಮೂರ್ತಿ ಭದಂಗ್​ ಹೇಳಿದ್ದಾರೆ. ಆರೋಪಿಯು ಸುಮಾರು 2 ವರ್ಷ, ಆರು ತಿಂಗಳುಗಳ ಕಾಲ ಕಸ್ಟಡಿಯಲ್ಲಿದ್ದಾನೆ ಎಂಬುದನ್ನು ಕೋರ್ಟ್​ ಗಮನಿಸಿದೆ.

2019ರ ಸೆಪ್ಟೆಂಬರ್​ 9ರಂದು ಕೊಲ್ಹಾಪುರದಲ್ಲಿ ಪೋಲೀಸರಿಂದ ಬಂಧಿಸಲ್ಪಟ್ಟು ಅಂದಿನಿಂದ ಕಂಬಿ ಹಿಂದೆ ಇರುವ ರೋಹಿತ್​ ಸುಕಾಟೆಗೆ ಕೋರ್ಟ್ ಜಾಮೀನು ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...