ಎರಡು ಹೊಸ ಸರಕು ಸಾಗಣೆ ವಾಹನ ಖರೀದಿಸಿದ ವ್ಯಕ್ತಿಯೊಬ್ಬರು ಅದಕ್ಕೆ ಪೂಜೆ ಸಲ್ಲಿಸುವ ವೇಳೆ ತಮ್ಮ ಪುಟ್ಟ ಮಗಳ ಕಾಲು ಗುರುತನ್ನು ವಾಹನದಲ್ಲಿ ಮೂಡಿಸಿ ಸಂಭ್ರಮಿಸಿದ್ದಾರೆ. ಈ ಘಳಿಗೆಯ ವಿಡಿಯೋ ಸಖತ್ ಸದ್ದುಮಾಡಿದೆ.
ಕುಂಕುಮ ನೀರು ಮಿಶ್ರಿತ ತಟ್ಟೆಯೊಳಗೆ ಮಗಳ ಕಾಲನ್ನು ಅದ್ದಿ ನಂತರ ವಾಹನದ ಮುಂಭಾಗಕ್ಕೆ ತಾಗಿಸುವ ಆ ಮೂಲಕ ತಂದೆಯು ಸಂಭ್ರಮಿಸುವ ಕ್ಷಣಗಳು ವಿಡಿಯೋದಲ್ಲಿದೆ.
ಆನ್ಲೈನ್ ಮೀಟಿಂಗ್ ವೇಳೆ ಮೊಬೈಲ್/ಪಿಸಿ ಕ್ಯಾಮೆರಾ ಆಫ್ ಮಾಡುವುದರಿಂದ ಪರಿಸರಕ್ಕೆ ಎಷ್ಟು ಸಹಕಾರಿ ಗೊತ್ತಾ….?
ಮಗಳ ಆಶೀರ್ವಾದ ಎಂದು ಈ ವಿಡಿಯೋಗೆ ಶೀರ್ಷಿಕೆ ಸಹ ಇದೆ. ಇದು ನೆಟ್ಟಿಗರನ್ನು ಖುಷಿಪಡಿಸಿದೆ. ಸಂಪ್ರದಾಯ ಮತ್ತು ಆಚರಣೆ ಅನುಸರಿಸುವುದನ್ನು ನೋಡಲು ಸುಂದರವಾಗಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು ಹೆಣ್ಣುಮಗುವನ್ನು ದೇವತೆಯೆಂದು ಪರಿಗಣಿಸಿರುವುದು ಖುಷಿಯಾಗಿದೆ ಎಂದಿದ್ದಾರೆ.