alex Certify ಇಲ್ಲಿದೆ ‘ಪರೀಕ್ಷೆ’ ಯ ಯಶಸ್ಸಿಗೆ ವಿದ್ಯಾರ್ಥಿಗಳಿಗೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಪರೀಕ್ಷೆ’ ಯ ಯಶಸ್ಸಿಗೆ ವಿದ್ಯಾರ್ಥಿಗಳಿಗೆ ಮಾಹಿತಿ

ಪರೀಕ್ಷೆಯ ಸಮಯವೆಂದರೆ ಕೇವಲ ವಿದ್ಯಾರ್ಥಿಗಳದ್ದಲ್ಲ. ಪೋಷಕರು, ಶಿಕ್ಷಕರಿಗೂ ಸಂಬಂಧಿಸಿದ ವಿಷಯ.

ಮಕ್ಕಳನ್ನು ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿಸಬೇಕಾದ ಜವಾಬ್ದಾರಿ ಪೋಷಕರು, ಶಿಕ್ಷಕರ ಮೇಲಿದೆ.

ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೇ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕೆಂದು ಅನೇಕರು ಹೇಳುತ್ತಾರೆ. ಒತ್ತಡಕ್ಕೆ ಒಳಗಾಗದೇ, ಲವಲವಿಕೆಯಿಂದ ಪರೀಕ್ಷೆಯನ್ನು ಎದುರಿಸಲು ಉತ್ಸಾಹದಿಂದ ಸಿದ್ಧತೆ ಮಾಡಿಕೊಳ್ಳಿ. ತರಗತಿಯಲ್ಲಿ ಶಿಕ್ಷಕರು ಈ ಮೊದಲೇ ಹೇಳಿದಂತೆ ಮುಖ್ಯವಾದ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಉತ್ತರಗಳನ್ನು ಹೆಚ್ಚು ಅಭ್ಯಾಸ ಮಾಡಿ.

ಸದ್ದಿಲ್ಲದೇ ಶುರುವಾಗಿದೆಯಾ ಲೋಡ್ ಶೆಡ್ಡಿಂಗ್…? ಪರೀಕ್ಷಾ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಪರದಾಟ

ಮೊದಲಿಗೆ ನೀವು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಗೊತ್ತಿರುವ ವಿಷಯಗಳೊಂದಿಗೆ ಗೊತ್ತಿಲ್ಲದ ವಿಷಯಗಳತ್ತ ಗಮನಹರಿಸಿ. ಅರ್ಥವಾಗದಿದ್ದರೆ, ಶಿಕ್ಷಕರು, ಉಪನ್ಯಾಸಕರಿಗೆ ಕೇಳಿ ತಿಳಿದುಕೊಳ್ಳಿ. ನಿಮಗೆ ಕಷ್ಟ ಎನಿಸಬಹುದಾದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ತೋರದೇ ಅವುಗಳ ಬಗ್ಗೆ ಹೆಚ್ಚು ಗಮನಹರಿಸಿ, ಒಂದೆರಡು ಬಾರಿ ಅಭ್ಯಾಸ ಮಾಡುವುದರಿಂದ ಸುಲಭವಾಗುತ್ತದೆ.

ಸದಾ ಒತ್ತಡಕ್ಕೆ ಒಳಗಾಗಿ ಓದಬೇಡಿ. ವಿಶ್ರಾಂತಿಯೂ ಮುಖ್ಯ. ವಿಶ್ರಾಂತಿ, ಓದು, ವೇಳಾಪಟ್ಟಿ ಬಗ್ಗೆ ನಿಮ್ಮ ಗಮನ ಇರಲಿ. ಇದರಿಂದ ಯಶಸ್ಸು ನಿಮ್ಮದಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...