ಇತ್ತೀಚಿನ ದಿನಗಳಲ್ಲಿ ಜನರು ನೌಕರಿ ಬಿಟ್ಟು ಕೃಷಿಯತ್ತ ಮುಖ ಮಾಡ್ತಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರು ಹಣ ಸಂಪಾದನೆ ಮಾಡುವ ದಾರಿ ಹುಡುಕುತ್ತಿದ್ದಾರೆ. ಇಂತವರಲ್ಲಿ ನೀವೂ ಒಬ್ಬರಾಗಿದ್ದರೆ ಹೈಡ್ರೋಪೋನಿಕ್ಸ್ ತಂತ್ರದ ಮೂಲಕ ನೀವು ಕೃಷಿ ಶುರು ಮಾಡಬಹುದು.
ಈ ಕೃಷಿಗೆ ಭೂಮಿಯ ಅವಶ್ಯಕತೆಯಿಲ್ಲ. ಈ ಕೃಷಿಯಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸಬಹುದು. ಮಣ್ಣಿಲ್ಲದೆ ಬೇಸಾಯ ಮಾಡುವ ಈ ವಿಧಾನ ನಗರವಾಸಿಗಳಿಗೆ ಹೇಳಿ ಮಾಡಿಸಿದ ಕೃಷಿ. ಟೆರೆಸ್ ನಲ್ಲಿ ಹೂ, ತರಕಾರಿ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮಣ್ಣು ಬೇಕಾಗದ ಕಾರಣ ಸ್ವಲ್ಪ ಜಾಗದಲ್ಲಿಯೇ ನೀವು ಕೃಷಿ ಶುರು ಮಾಡಬಹುದು. ನೀರಿನ ಮೂಲಕವೇ ಪೌಷ್ಟಿಕಾಂಶವನ್ನು ಗಿಡಕ್ಕೆ ತಲುಪಿಸಲಾಗುತ್ತದೆ.
ಬೇಸಿಗೆಯಲ್ಲಿ ‘ಕುಲು’ ಗೆ ಭೇಟಿ ನೀಡಲೇಬೇಕು
ಪಾಲಿ ಹೌಸ್ ಅಥವಾ ನೆಟ್ ಹೌಸಿನ ಅವಶ್ಯಕತೆ ಇದಕ್ಕಿರುತ್ತದೆ. ಅನೇಕ ಕಂಪನಿಗಳು ಹೈಡ್ರೋಪೋನಿಕ್ಸ್ ತಂತ್ರಜ್ಞಾನದ ಸೇವೆಯನ್ನು ಒದಗಿಸುತ್ತಿವೆ. ಆರಂಭದಲ್ಲಿ 400 ಗಿಡಗಳ ಪೈಪ್ ಗೆ ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ. ನಂತ್ರ ಪೋಷಕಾಂಶ ಹಾಗೂ ನೀರಿಗೆ ಮಾತ್ರ ಖರ್ಚು ಮಾಡಿದ್ರೆ ಸಾಕು. ದುಬಾರಿ ಹಣ್ಣು ಅಥವಾ ತರಕಾರಿಯನ್ನು ಇದ್ರಲ್ಲಿ ಬೆಳೆದು ನೀವು ಹಣ ಗಳಿಸಬಹುದು.