ಇಸ್ಲಾಮಾಬಾದ್: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಣಾಯಕ ಅವಿಶ್ವಾಸ ಮತವನ್ನು ಕಳೆದುಕೊಳ್ಳುವ ನಿಮಿಷಗಳ ಮೊದಲು ಪ್ರಧಾನಿಯವರ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ.
ಇಮ್ರಾನ್ ಖಾನ್ ತಮ್ಮ ನಿವಾಸವನ್ನು ಮಧ್ಯರಾತ್ರಿ ಹಠಾತ್ ಖಾಲಿ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆ ನಿವಾಸದಲ್ಲಿ ಕೆಲ ದಿನ ಇದ್ದು ನಂತರ ಖಾಲಿ ಮಾಡಬಹುದಿತ್ತು. ಆದರೆ, ಅಧಿಕಾರ ಕಳೆದುಕೊಳ್ಳುವ ಮೊದಲೇ 15ಕ್ಕೂ ಹೆಚ್ಚು ಕಾರುಗಳ ಸಮೂಹವು ಖಾನ್ ಅವರ ನಿವಾಸದಿಂದ ಹೊರಹೋಗುತ್ತಿರುವುದು ಕಂಡುಬಂದಿದೆ.
ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವು ಭಾನುವಾರ ಮಧ್ಯರಾತ್ರಿ ಕಳೆದ ಒಂದು ಗಂಟೆಯ ನಂತರ ಯಶಸ್ವಿಯಾಯಿತು, 342 ಬಲದ ಸದನದಲ್ಲಿ 174 ಸದಸ್ಯರು ಮೋಷನ್ ಪರವಾಗಿ ಮತ ಚಲಾಯಿಸಿದರು. ಇಮ್ರಾನ್ ಖಾನ್ ಅವರು ಪ್ರಧಾನಿ ಕಚೇರಿಯಿಂದ ಬನಿಗಾಲದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.