alex Certify ಬಾಯಲ್ಲಿ ನೀರೂರಿಸುತ್ತೆ ಈ ವಿಭಿನ್ನ ಶೈಲಿಯ ಕೇಶ ವಿನ್ಯಾಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುತ್ತೆ ಈ ವಿಭಿನ್ನ ಶೈಲಿಯ ಕೇಶ ವಿನ್ಯಾಸ….!

Viral Video: Man Gets New Food Haircut Every Day Using Cheetos, Noodles & More. Watchಕೇಶವಿನ್ಯಾಸವು ಬಾಯಲ್ಲಿ ನೀರೂರಿಸಬಹುದೇ ? ಅರೆ….. ಹೇರ್ ಸ್ಟೈಲ್ಸ್ ಹೇಗೆ ಬಾಯಲ್ಲಿ ನೀರೂರಲು ಸಾಧ್ಯ ಅಂತಾ ಆಶ್ಚರ್ಯಪಡುತ್ತಿದ್ದೀರಾ..? ಹಾಗಿದ್ರೆ ನೀವು ಈ ವಿಡಿಯೋ ನೋಡಲೇಬೇಕು..

ಹೌದು, ಕೇಶವಿನ್ಯಾಸಕಾರನೊಬ್ಬ ಗ್ರಾಹಕರಿಗೆ ಮಾಡುತ್ತಿರುವ ವಿಭಿನ್ನ ಹೇರ್ ಸ್ಟೈಲ್ ವಿಡಿಯೋ ವೈರಲ್ ಆಗುತ್ತಿದೆ. ಸ್ವತಃ ಕ್ಷೌರಿಕನಾಗಿರೋ ಪೌಲ್ ಜೋನ್ಸ್ ಎಂಬಾತ ಆಹಾರ ಕೇಶವಿನ್ಯಾಸ ಮಾಡಿಸಿಕೊಂಡಿದ್ದಾನೆ. ಅವನ ತಲೆಯನ್ನು ಬಗೆ-ಬಗೆಯ ಆಹಾರದಿಂದ ವಿನ್ಯಾಸ ಮಾಡಿಕೊಂಡಿದ್ದಾನೆ.

ಪಾಲ್‌ನ ಮೊದಲ ಕೇಶ ವಿನ್ಯಾಸದಲ್ಲಿ ತನ್ನ ತಲೆಯ ಮೇಲೆ ನೂಡಲ್ಸ್‌ ಪ್ಯಾಕ್ ಅನ್ನು ಬಳಸಿದ್ದಾನೆ. ಅವನ ಹೊಸ ಆಹಾರ ವಿಗ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಕೇಶವಿನ್ಯಾಸಕಾರ ಆತನ ತಲೆ ಮೇಲೆ ಮಸಾಲೆಯನ್ನು ಸಿಂಪಡಿಸಿದ್ದಾನೆ.

ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಚೀಟೋಸ್ ಪಫ್‌ಗಳನ್ನು ಹೊಂದಿರುವ ಹೇರ್ ಸ್ಟೈಲ್ ಅತ್ಯಂತ ಜನಪ್ರಿಯ ಕೇಶ ವಿನ್ಯಾಸವಾಗಿದೆ. ನಂತರ ಹಂದಿಮಾಂಸದ ತುಂಡನ್ನು ಕೂಡ ಕೇಶವಿನ್ಯಾಸವನ್ನಾಗಿ ಮಾಡಲಾಗಿದೆ. ಬಹುತೇಕ ಆತನ ಎಲ್ಲಾ ಹೇರ್ ಸ್ಟೈಲ್‌ಗಳು ಖಾರವಾಗಿದ್ದವು, ಕೆಲವು ಮಾತ್ರ ಸಿಹಿಯಾಗಿದ್ದವು.

ವಿಭಿನ್ನ ಶೈಲಿಯ ಆಹಾರ ಕೇಶವಿನ್ಯಾಸದ ವಿಡಿಯೋಗಳು ವೈರಲ್ ಆಗುತ್ತಿದ್ದು, ಟೇಸ್ಟಿ ಹೇರ್ ಕಟ್‌ಗಳನ್ನು ಸೂಪರ್ ಕ್ರಿಯೇಟಿವ್ ಮತ್ತು ಉಲ್ಲಾಸಕರವಾಗಿದೆ ಎಂದು ಹೇಳಿದ್ದಾರೆ.

https://youtu.be/tHqM4VGVsgc

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...