alex Certify 1.2 ಕೋಟಿ ರೂಪಾಯಿ ವಾರ್ಷಿಕ ವೇತನದ ಉದ್ಯೋಗ ಪಡೆದ ವಿದ್ಯಾರ್ಥಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.2 ಕೋಟಿ ರೂಪಾಯಿ ವಾರ್ಷಿಕ ವೇತನದ ಉದ್ಯೋಗ ಪಡೆದ ವಿದ್ಯಾರ್ಥಿ..!

ಲಕ್ನೋದ​ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಇನ್​ಫಾರ್ಮೇಷನ್​ & ಟೆಕ್ನಾಲಜಿಯ ವಿದ್ಯಾರ್ಥಿಯೊಬ್ಬರು ಸಂಸ್ಥೆಯೊಂದರ ಅತ್ಯಧಿಕ ವಾರ್ಷಿಕ ವೇತನ ಪ್ಯಾಕೇಜ್​ ಆದ 1.2 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐರ್ಲೆಂಡ್​​ನ ಡಬ್ಲಿನ್​ನಲ್ಲಿ ಅಮೆಜಾನ್​ನ ಸಾಫ್ಟ್​ವೇರ್​ ಡೆವಲಪ್​ಮೆಂಟ್​ ಇಂಜಿನಿಯರ್​ ಆಗಿ ಅಭಿಜಿತ್​​ ದ್ವಿವೇದಿ ನೇಮಕಗೊಂಡಿದ್ದಾರೆ.‌

ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಬಿ.ಟೆಕ್‌ನ ಅಂತಿಮ ವರ್ಷದಲ್ಲಿರುವ ಅಭಿಜಿತ್, ದಿಗ್ಭ್ರಮೆಗೊಳಿಸುವ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಹಿಂದಿನ ಎಲ್ಲಾ ಪ್ಲೇಸ್‌ಮೆಂಟ್ ದಾಖಲೆಗಳನ್ನು ಮುರಿದಿದ್ದಾರೆ.

ನಾನು ಸಾಕಷ್ಟು ವಿಡಿಯೋಗಳನ್ನು ವೀಕ್ಷಿಸಿ ಸಂದರ್ಶನಕ್ಕೆ ನಾನೇ ತಯಾರಾಗಿದ್ದೆ. ಸಾಫ್ಟ್​ ಸ್ಕಿಲ್​ ತುಂಬಾನೇ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಹೀಗಾಗಿ ಇಂಜಿನಿಯರ್​ ಪದವೀಧರರು ಕೇವಲ ಟೆಕ್ನಿಕಲ್​​ ಜ್ಞಾನದ ಬಗ್ಗೆ ಮಾತ್ರ ತಿಳಿದಿದ್ದರೆ ಸಾಲದು. ನಿಮ್ಮ ಸಂವಹನ ಕೌಶಲ್ಯ ಹಾಗೂ ಹಾವಭಾವ ಕೂಡ ಮುಖ್ಯವಾಗುತ್ತದೆ ಎಂದು ಅಭಿಜಿತ್​ ಹೇಳಿದ್ದಾರೆ.

ಉದ್ಯೋಗವನ್ನು ಅರಸುತ್ತಿರುವ ಇತರೆ ಪದವೀಧರರಿಗೆ ಅಭಿಜಿತ್​ ಕೆಲವು ಸಲಹೆಗಳನ್ನು ನೀಡಿದ್ದಾರೆ. ಉತ್ತಮ ಕೆಲಸವನ್ನು ಪಡೆದುಕೊಳ್ಳಲು ಕೆಲವೊಂದು ವಿಷಯಗಳ ಮೇಲೆ ಕೆಲಸ ಮಾಡಬೇಕು.ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಸಂದರ್ಶನಗಳನ್ನು ಎದುರಿಸಲು ನಿಮ್ಮ ಸೀನಿಯರ್​ಗಳ ಜೊತೆ ಸಂಪರ್ಕದಲ್ಲಿರಿ. ಅಲ್ಲದೇ ನಿಯಮಿತವಾಗಿ ನವೀಕರಣಗೊಳ್ಳಬಲ್ಲ ಜನಪ್ರಿಯ ಉದ್ಯೋಗ ಪೋರ್ಟಲ್​​ಗಳಲ್ಲಿ ನಿಮ್ಮ ಪ್ರೊಫೈಲ್​ಗಳನ್ನು ರಚಿಸಿ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...