alex Certify SHOCKING NEWS: ಆಕ್ಸಿಜನ್ ಕೊರತೆ; ಆಂಬುಲೆನ್ಸ್ ನಲ್ಲಿಯೇ ಪ್ರಾಣಬಿಟ್ಟ ನವಜಾತ ಶಿಶು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಆಕ್ಸಿಜನ್ ಕೊರತೆ; ಆಂಬುಲೆನ್ಸ್ ನಲ್ಲಿಯೇ ಪ್ರಾಣಬಿಟ್ಟ ನವಜಾತ ಶಿಶು

ದಾವಣಗೆರೆ: ಆಕ್ಸಿಜನ್ ಕೊರತೆಯಿಂದಾಗಿ ನವಜಾತಶಿಶು ಆಂಬುಲೆನ್ಸ್ ನಲ್ಲಿಯೇ ಕೊನೆಯುಸಿರೆಳೆದ ಘಟನೆ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿದೆ.

ಬಸವಪಟ್ಟಣದ ಶೃಂಗಾಯಬಾಬು ತಾಂಡಾದ ಹಾಲೇಶ್ ನಾಯಕ್ ಹಾಗೂ ಸ್ವಾತಿ ದಂಪತಿಯ ಮಗು ಸಾವನ್ನಪ್ಪಿದ ಮಗು. ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹೊನ್ನಾಳಿ ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ನಿರ್ಧರಿಸಿದ್ದರು. ಆಕ್ಸಿಜನ್ ಇಲ್ಲದಿದ್ದರೂ ಆಂಬುಲೆನ್ಸ್ ಚಾಲಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಅರ್ಧದಾರಿಗೆ ಹೋಗುತ್ತಿದ್ದಂತೆ ಮತ್ತೊಂದು ಆಂಬುಲೆನ್ಸ್ ಬರುತ್ತದೆ ಎಂದು ಹೇಳಿದ್ದಾನೆ. ಹೊನ್ನಾಳಿ ಆಸ್ಪತ್ರೆಗೆ ತಲುಪುವವರೆಗೂ ಆಕ್ಸಿಜನ್ ಇಲ್ಲದೇ ಮಗು ಮಾರ್ಗಮಧ್ಯೆಯೇ ಮೃತಪಟ್ಟಿದೆ.

ಪೋಷಕರು ಆಸ್ಪತ್ರೆ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...