ಏನಾದ್ರೂ ವಿಶ್ವದಾಖಲೆ ಮಾಡುವುದಕ್ಕಾಗಿ ಹಲವಾರು ಜನರು ತಾವು ಏನು ಮಾಡಲು ಕೂಡ ಸಿದ್ಧರಾಗಿರುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಕೂಡ ಹಾಕುತ್ತಾರೆ. ಆದರೆ, ಒಬ್ಬ ಪ್ರಸಿದ್ಧ ಬಾಣಸಿಗ ನೀರಿನ ಅಡಿಯಲ್ಲಿ ತನ್ನ ಕೌಶಲ್ಯವನ್ನು ತೋರಿಸುವುದನ್ನು ನೀವು ನೋಡಿದ್ದೀರಾ?
ಟಿಕ್‌ಟಾಕ್ ಸೆನ್ಸೇಷನ್ ಮತ್ತು ಸಿಜೆಎನ್ ಬುರಾಕ್ ಎಂದೂ ಕರೆಯಲ್ಪಡುವ ಟರ್ಕಿಶ್ ಸೆಲೆಬ್ರಿಟಿ ಚೆಫ್ ಓಜ್‌ಡೆಮಿರ್ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ನೀರಿನಲ್ಲಿ ಮುಳುಗಿರುವಾಗ ಸೌತೆಕಾಯಿಗಳನ್ನು ಸಂಪೂರ್ಣವಾಗಿ ಕತ್ತರಿಸುವುದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡಿದ್ದು, ವೈರಲ್ ಆಗಿದೆ. ಇದು 23.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 2.9 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.
ನೀರಿನಲ್ಲಿ ಮುಳುಗಿರುವ ಓಜ್ಡೆಮಿರ್ ತನ್ನ ಬೆರಳುಗಳನ್ನು ನೋಯಿಸದೆ, ತೀಕ್ಷ್ಣವಾದ ಚಾಕುವಿನಿಂದ ಸೌತೆಕಾಯಿಯನ್ನು ಕೌಶಲ್ಯದಿಂದ ಕತ್ತರಿಸಿದ್ದಾನೆ. ನಂತರ ತನ್ನ ಮುಖದ ಬಳಿ ನೀರಿನಲ್ಲಿ ತೇಲುತ್ತಿದ್ದ ಸೌತೆಕಾಯಿಯ ತೆಳುವಾದ ಸ್ಲೈಸ್ ಅನ್ನು ಕ್ಯಾಮರಾದತ್ತ ತೋರಿಸಿದ್ದಾನೆ.
ಈ ವಿಡಿಯೋದಿಂದ ನೆಟ್ಟಿಗರು ಪ್ರಭಾವಿತಗೊಂಡಿದ್ದಾರೆ. ನೀರಿನಾಳದಲ್ಲಿ ಟರ್ಕಿಶ್ ಬಾಣಸಿಗ ಬಹಳ ವೇಗವಾಗಿ ಸೌತೆಕಾಯಿ ಕಟ್ ಮಾಡಿರುವುದನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.