alex Certify ಗಗನಕ್ಕೇರಿದ ಇಂಧನ ಬೆಲೆ: ಗೆಳತಿ ಭೇಟಿಯಾಗಲು ಸಾಧ್ಯವಾಗದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ಪ್ರೇಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ ಇಂಧನ ಬೆಲೆ: ಗೆಳತಿ ಭೇಟಿಯಾಗಲು ಸಾಧ್ಯವಾಗದ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ ಪ್ರೇಮಿ

ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಅವರ ಸ್ಥಿತಿ ಮತ್ತಷ್ಟು ದುಸ್ತರಗೊಂಡಿದೆ. ಇಂಧನ ಬೆಲೆ ಏರಿಕೆಯಿಂದ ರೋಸಿ ಹೋಗಿರುವ ನೆಟ್ಟಿಗರು ವ್ಯಂಗ್ಯಾತ್ಮಕ ಮೀಮ್‌ಗಳು ಮತ್ತು ಜೋಕ್‌ಗಳ ಮೂಲಕ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ.

ಕೆಲವು ಸೃಜನಾತ್ಮಕ ನೆಟ್ಟಿಗರು ಬೆಲೆ ಏರಿಕೆಗೆ ಸ್ವಲ್ಪ ಹಾಸ್ಯಮಯ ತಿರುವು ನೀಡುತ್ತಿದ್ದಾರೆ. ಇದೀಗ ಬಿಹಾರ ಮೂಲದ ವ್ಯಕ್ತಿಯೊಬ್ಬರು ಪೆಟ್ರೋಲ್ ಬೆಲೆ ಏರಿಕೆಯಿಂದ ತನ್ನ ಗೆಳತಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ವಿವರಿಸುವ ಹಾಡನ್ನು ರಚಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪ್ರೇಮಿಯೊಬ್ಬ, ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಮಗಾಹಿ ಹಾಡಿನ ಮೂಲಕ ತನ್ನ ದುಃಖ ಹೊರಹಾಕಿದ್ದಾರೆ. ಯುವಕ ತನ್ನ ಗೆಳತಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಾ, ಆಕೆಯನ್ನು ಭೇಟಿಯಾಗಬೇಕೆಂದು ಕನಸು ಕಾಣುತ್ತಾನೆ. ಆದರೆ, ಹೆಚ್ಚಿದ ಪೆಟ್ರೋಲ್ ಬೆಲೆಯಿಂದ ಅವಳನ್ನು ಭೇಟಿಯಾಗುವುದು ಕಷ್ಟಕರವಾಗಿದೆ ಎಂದು ಕೊರಗುತ್ತಾನೆ.

ಮಾಗಧಿ ಬಾಯ್ಸ್ ಎಂಬ ಫೇಸ್‌ಬುಕ್ ಪುಟವು ವಿಡಿಯೊವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿರುವ ಯುವಕನನ್ನು ವಿಶ್ವಜೀತ್ ಎಂದು ಗುರುತಿಸಲಾಗಿದ್ದು, ಅವರು ಆಗಾಗ ಇಂತಹ ಮನರಂಜನಾ ವಿಡಿಯೋಗಳನ್ನು ರಚಿಸುತ್ತಾರೆ.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ಹಾಸ್ಯ ಚಟಾಕಿ ಹಾರಿಸಿದರೆ, ಇನ್ನು ಕೆಲವರು ಇಂಧನ ಬೆಲೆ ಏರಿಕೆ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...