alex Certify ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ

ಮೆಟ್ರೋ‌ ನಿಲ್ದಾಣದಲ್ಲಿ ಬೊಕೆ ಮಾರಾಟ‌ ಮಾಡುತ್ತಾ ಗ್ರಾಹಕರಿಗಾಗಿ ಕಾಯುತ್ತಿದ್ದ ಹಣ್ಣುಹಣ್ಣು ಮುದುಕಿಗೆ ಯುವಕನೊಬ್ಬ ಸರ್ಫ್ರೈಸ್ ನೀಡಿದ ವಿಡಿಯೋ ವೈರಲ್ ಆಗಿದೆ.

ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, 40 ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ.‌

ಗ್ರಾಹಕರ ಬರುವಿಕೆಗಾಗಿ ಕಾತರದಿಂದ ಕಾಯ್ದಿದ್ದ ಅಜ್ಜಿಯ ಮುಂದೆ ನಿಂತ ಯುವಕ ಬೊಕೆ ಕೊಡುವಂತೆ ಹಣ ನೀಡುತ್ತಾನೆ, ಅಜ್ಜಿ ಬೊಕೆ ಕೊಡುತ್ತಿದ್ದಂತೆ ಆ ಯುವಕ ಅದನ್ನು ಅಜ್ಜಿಗೆ ನೀಡಿ, ಇದು ನಿಮಗೆ ಎಂದಾಗ ಅಜ್ಜಿ ಭಾವುಕರಾಗಿ ಬಿಡುತ್ತಾರೆ.

ವಯಸ್ಸಾದ ಅಜ್ಜಿಯಿಂದ ಹೂವುಗಳನ್ನು ಖರೀದಿಸುವ ಮತ್ತು ಅದನ್ನು ಆಕೆಯ ಕೈಗಿಡುವ ಸನ್ನಿವೇಶ ನೋಡುವವರಿಗೆ ಸಹ ಹೃದಯಸ್ಪರ್ಶಿ ಎನಿಸಿದೆ. ಆ ಹುಡುಗನು ಆನ್‌ಲೈನ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...