alex Certify Shocking Video: ಎಮರ್ಜೆನ್ಸಿ ಲ್ಯಾಂಡಿಂಗ್‌ ವೇಳೆ ಎರಡು ಹೋಳಾದ ವಿಮಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ಎಮರ್ಜೆನ್ಸಿ ಲ್ಯಾಂಡಿಂಗ್‌ ವೇಳೆ ಎರಡು ಹೋಳಾದ ವಿಮಾನ…!

ಡಿಹೆಚ್​ಎಲ್​ ಕಾರ್ಗೋ ವಿಮಾನವು ಕೋಸ್ಟಾರಿಕಾದ ಜುವಾನ್​ ಸಾಂತಾಮರಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​​ ಆಗಿದ್ದು ಅಧಿಕಾರಿಗಳು ಬಹಳ ಸಮಯ ವಿಮಾನ ನಿಲ್ದಾಣವನ್ನು ಬಂದ್​ ಮಾಡಿದ್ದರು.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ವಿಮಾನವು ತುರ್ತು ಲ್ಯಾಂಡಿಂಗ್​ ಆದ ಬಳಿಕ ರನ್​ವೇನಲ್ಲಿ ಸ್ಕಿಡ್​ ಆಗಿರುವುದನ್ನು ಕಾಣಬಹುದಾಗಿದೆ.

ರನ್​ವೇನಲ್ಲಿ ಸ್ಕಿಡ್​ ಆದ ವಿಮಾನವು ರನ್​ವೇನಿಂದ ಹುಲ್ಲುಗಾವಲು ಪ್ರದೇಶವನ್ನು ಪ್ರವೇಶಿಸಿ ಎರಡು ಭಾಗಗಳಾಗಿ ವಿಭಜನೆಯಾಯಿತು ಎಂದು ವಾಯುಯಾನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೈಲಟ್​ ಹಾಗೂ ಸಹ ಪೈಲಟ್​ನ್ನು ಸ್ಥಳಾಂತರಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕ ಏರಿಸ್​ ಮಾಹಿತಿ ನೀಡಿದ್ದಾರೆ.

ಈ ಘಟನೆಯ ವಿವಿಧ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸುತ್ತುತ್ತಿದ್ದು ಹಳದಿ ಬಣ್ಣದ ವಿಮಾನವು ತುಂಡಾದ ಬಳಿಕ ಮುರಿದ ರೆಕ್ಕೆಯೊಂದಿಗೆ ಹುಲ್ಲಿನ ಹಾಸನ್ನು ಪ್ರವೇಶಿಸಿದೆ. ಅಗ್ನಿಶಾಮಕ ದಳ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆಯಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಓರ್ವ ಸಿಬ್ಬಂದಿಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.

— ADS-B Costa Rica (@adsbcr) April 7, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...