ಕಾಡಿನಲ್ಲಿ ಆನೆ – ಸಿಂಹದ ನಡುವೆ ಕಾದಾಟ ಬಲು ಜೋರು..! ಕೊನೆಗೆ ಸೋತಿದ್ಯಾರು ಗೊತ್ತಾ..? 08-04-2022 8:23AM IST / No Comments / Posted In: Featured News, Live News, International ಕಾಡಿನ ರಾಜ ಸಿಂಹಗಳು ಆನೆಗಳ ಮೊದಲ ಶತ್ರು ಅಂತಾನೇ ಹೇಳಲಾಗುತ್ತದೆ. ಮನುಷ್ಯರನ್ನು ಹೊರತುಪಡಿಸಿ, ಸಿಂಹಗಳು ಮಾತ್ರ ಆನೆಯನ್ನು ಕೊಲ್ಲುವಷ್ಟು ಶಕ್ತಿಯುತವಾದ ಪರಭಕ್ಷಕಗಳಾಗಿವೆ. ಗಂಡು, ಹೆಣ್ಣಿಗಿಂತ 50% ತೂಕವಿರುತ್ತದೆ. ಆನೆಯನ್ನು ಕೊಲ್ಲಲು ಸಾಮಾನ್ಯವಾಗಿ ಎಂಟತ್ತು ಹೆಣ್ಣು ಸಿಂಹಗಳು ಬೇಕು. ಆದರೆ, ಕೇವಲ ಎರಡು ಗಂಡು ಸಿಂಹಗಳು ಆನೆಯನ್ನು ಕೊಲ್ಲಬಲ್ಲವು. ಒಂದು ಗಂಡು ಸಿಂಹ ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು. ಹಾಗಂತ ಆನೆಗಳು ಹಿಂಡಿನಲ್ಲಿ ಬಂದರೆ ಗುಂಪಿನಲ್ಲಿರುವ ಸಿಂಹಗಳು ಭಯದಿಂದ ಕೂಡ ಓಡಿಹೋಗಿರುವ ನಿದರ್ಶನಗಳಿವೆ. ಇದೀಗ ಆನೆಯನ್ನು ಬೇಟೆಯಾಡಲು ಹೆಣ್ಣು ಸಿಂಹ ಕಷ್ಟಪಡುತ್ತಿರುವುದನ್ನು ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ. ವನ್ಯಜೀವಿ ಛಾಯಾಗ್ರಾಹಕರಿಂದ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಬಳಕೆದಾರರು ಟ್ವಿಟ್ಟರ್ನಲ್ಲಿ ವಿಡಿಯೋವನ್ನು ಮರುಹಂಚಿದ್ದಾರೆ. ಆನೆ ಮತ್ತು ಸಿಂಹಿಣಿಯ ನಡುವೆ ತೀವ್ರವಾದ ಕಾಳಗ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆನೆಯ ದೊಡ್ಡ ಕಿವಿಯನ್ನು ಹೆಣ್ಣು ಸಿಂಹ ಕಚ್ಚಿ ಹಿಡಿದುಕೊಂಡು ಕಾದಾಟ ಪ್ರಾರಂಭಿಸಿದೆ. ಆನೆಯು ಕೂಡ ಸಿಂಹಿಣಿಯನ್ನು ಕೆಳಗೆ ಬೀಳಿಸಲು ಬಹಳಷ್ಟು ಪ್ರಯತ್ನಪಡುತ್ತದೆ. ಆನೆಯ ಕಿವಿಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದುಕೊಂಡು ಸಿಂಹ ನೇತಾಡುತ್ತಿದೆ. ಆನೆಯು ಬಹಳ ನೋವಿನಿಂದ ಕಿರುಚಿ ಸಿಂಹವನ್ನು ಪೊದೆಯತ್ತ ಎಸೆಯುತ್ತದೆ. ನಂತರ ಸಿಂಹವನ್ನು ಅಲ್ಲಿಂದ ಓಡಿಸಲು ಮುನ್ನುಗ್ಗಿದೆ. ಸದ್ಯ, ಕಾಡು ಪ್ರಾಣಿಗಳ ಕಾದಾಟದ ವಿಡಿಯೋ ವೈರಲ್ ಆಗಿದೆ. pic.twitter.com/6xlzQgiqdC — existing in nature (@afaf66551) June 24, 2021