ಮೈಸೂರು: ಮೈಸೂರಿನಲ್ಲಿ ಶಕ್ತಿಧಾಮ ವಿದ್ಯಾಶಾಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಾಪನೆ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಬಜೆಟ್ ಬಹಳ ಅಂತಃಕರಣದಿಂದ ಕೂಡಿರುವಂಥದ್ದು. ಕಷ್ಟದಲ್ಲಿರುವ ಜನರಿಗೆ ಈ ಬಜೆಟ್ನಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಮಾನವೀಯತೆ ಯೋಜನೆಗಳನ್ನು ಜಾರಿ ಮಾಡಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. 4 ಲಕ್ಷ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗದ ಯೋಜನೆಯನ್ನು ರೂಪಿಸಲಾಗಿದೆ. ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಶಕ್ತಿಧಾಮ ವಿಶೇಷ ಅನುದಾನವಾಗಿ 5 ಕೋಟಿ ರೂಪಾಯಿ ನೀಡಲಾಗುವುದು. ಬಡಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಹೇಳಿದ್ದಾರೆ.
ಸ್ತ್ರೀ ಎಂದರೆ ಒಂದು ಶಕ್ತಿ ಎಂದು ಸಿಎಂ ಹೇಳಿದ್ದು, ಎಲ್ಲದಕ್ಕೂ ಪೊಲೀಸರನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಆದರೆ, ಕೆಂಪಯ್ಯ ಮತ್ತು ರಾಜಕುಮಾರ್ ಅವರದ್ದು ಉತ್ತಮ ಸಂಬಂಧವಾಗಿತ್ತು. ನಮ್ಮ ಅಪ್ಪುಗೆ ತಾಯಿಕರುಳು ಇತ್ತು. ನೂರಾರು ಜನರಿಗೆ ನಟ ಪುನೀತ್ ರಾಜಕುಮಾರ್ ಸಹಾಯ ಮಾಡಿದ್ದಾರೆ ಎಂದರು.
ಶೋಷಿತ, ದುರ್ಬಲ ವರ್ಗದವರಿಗೆ ಸರ್ಕಾರ ನೆರವಾಗಬೇಕು. ಕೇವಲ ಮಾತುಗಳಿಂದ ಜನರಿಗೆ ಸಹಾಯ ಆಗುವುದಿಲ್ಲ. ಶಕ್ತಿಧಾಮದ ಮಕ್ಕಳನ್ನು ಅನಾಥ ಮಕ್ಕಳು ಎನ್ನಬಾರದು. ಅವರನ್ನು ದೇವರ ಮಕ್ಕಳು ಎಂದು ಕರೆಯಬೇಕೆಂದು ಸಿಎಂ ಹೇಳಿದ್ದಾರೆ. ಶಕ್ತಿಧಾಮಕ್ಕೆ 5 ಕೋಟಿ ರೂ. ನೆರವು ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.