ಬೆಂಗಳೂರು: ಅಡುಗೆ ಎಣ್ಣೆ, ಎಲ್ಪಿಜಿ ಸಿಲಿಂಡರ್, ಪೆಟ್ರೋಲ್-ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆಯಲ್ಲಿ ಮದ್ಯದ ದರ ಕೂಡ ಏರಿಕೆಯಾಗಲಿದೆ.
ಶೀಘ್ರದಲ್ಲೇ ಹಾಲಿನ ದರ ಕೂಡ ಏರಿಕೆಯಾಗಲಿದೆ. ಇನ್ನೂ ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಕಂಪನಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಜೆಟ್ ನಲ್ಲಿ ಯಾವುದೇ ತೆರಿಗೆಯ ಬಗ್ಗೆ ಪ್ರಸ್ತಾಪ ಮಾಡದಿದ್ದರೂ, ಬಿಯರ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲ ಬ್ರಾಂಡ್ ಗಳ ಬಿಯರ್ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಬಾರ್ಲಿ ಸೇರಿದಂತೆ ಬಿಯರ್ ಉತ್ಪಾದನೆಗೆ ಅಗತ್ಯವಾದ ವಸ್ತುಗಳ ದರ ಮತ್ತು ಸಾಗಣೆ ವೆಚ್ಚ ಹೆಚ್ಚಳವಾಗಿದ್ದರಿಂದ ಬಿಯರ್ ಬೆಲೆಯನ್ನು ಪ್ರತಿ ಬಾಟಲ್ ಗೆ 10 ರೂಪಾಯಿ ಏರಿಕೆ ಮಾಡುವ ಬಗ್ಗೆ ಅಬಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ಪಡೆದುಕೊಳ್ಳಲಾಗಿದೆ. ಟುಬೊರ್ಗ್, ಕಿಂಗ್ ಫಿಶರ್ ಸೇರಿದಂತೆ ಎಲ್ಲ ಮಾದರಿ ಬಿಯರ್ ಬೆಲೆ ಹೆಚ್ಚಳವಾಗಲಿದ್ದು, ಪರಿಷ್ಕೃತ ದರ ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.