ನವದೆಹಲಿ: ಹಿಜಾಬ್ ಸಂಘರ್ಷದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮಂಡ್ಯದ ಯುವತಿ ಮುಸ್ಕಾನ್ ಗೆ ಅಲ್ ಖೈದಾ ನಾಯಕ, ಮೋಸ್ಟ್ ವಾಂಟೆಡ್ ಉಗ್ರ ಅಲ್ ಜವಾಹರಿ ಮುಸ್ಕಾನ್ ಭಾರತದ ಶ್ರೇಷ್ಠ ಮಹಿಳೆ ಎಂದು ಶಹಬ್ಬಾಸ್ ಗಿರಿ ನೀಡಿದ್ದಾನೆ.
ರಾಜ್ಯದಲ್ಲಿ ಹಿಜಾಬ್ ವಿವಾದ ವೇಳೆ ನಡೆದಿದ್ದ ಪ್ರತಿಭಟನೆಯ ವೇಳೆ ಮುಸ್ಕಾನ್ ಮಂಡ್ಯದ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಳು. ಕರ್ನಾಟಕದ ಹಿಜಾಬ್ ವಿಚಾರವಾಗಿ ಇದೀಗ ಅಲ್ ಖೈದಾ ಉಗ್ರ ಸಂಘಟನೆ ನಾಯಕ ಅಲ್ ಜವಹಿರಿ ಮುಸ್ಕಾನ್ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಪ್ರತ್ಯೇಕ ಸಾಹಿತ್ಯ ಬರೆದು, ವಿಡಿಯೋ ಮಾಡಿ ಬಿಡುಗಡೆಗೊಳಿಸಿದ್ದಾನೆ.
ರಾತ್ರಿ ಮಲಗಿದ ಬಾಲಕಿ ಎದ್ದಿದ್ದು 9 ವರ್ಷಗಳ ಬಳಿಕ, ಅಷ್ಟರಲ್ಲಿ ನಡೆದು ಹೋಗಿತ್ತು ದುರಂತ…!
ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರನ ಈ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಡಾ.ಅಶ್ವತ್ಥನಾರಾಯಣ, ಇಂತಹ ಉಗ್ರ ಸಂಘಟನೆಗಳ ಹೇಳಿಕೆಯನ್ನು ಖಂಡಿಸುತ್ತೇನೆ. ನಮ್ಮ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವುದು ಬೇಡ. ನಮ್ಮ ಸರ್ಕಾರ ಯಾವುದೇ ವಿರೋಧಿ ನೀತಿ ಅನುಸರಿಸುತ್ತಿಲ್ಲ. ಇರುವ ಕಾನೂನನ್ನು ಜಾರಿ ಮಾಡುತ್ತಿದ್ದೇವೆ ಅಷ್ಟೇ. ಹೊಸದಾಗಿ ಯಾವುದೇ ಕಾನೂನು ತಂದಿಲ್ಲ. ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ಒಡಕು ಮೂಡಿಸುವುದು ಬೇಡ ಎಂದು ಹೇಳಿದ್ದಾರೆ.