ಮೈಸೂರು: ಓರ್ವ ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅವರಿಗೆ ಜವಾಬ್ದಾರಿ ಅರಿವಿಲ್ಲವೇ? ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿದ್ದಾರೆ. ಇಂಥಹ ಗೃಹ ಸಚಿವರಿದ್ದರೆ ಪೊಲೀಸ್ ಇಲಾಖೆಯಾದರೂ ಏನು ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಜೆ ನಗರದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ಉರ್ದು ಭಾಷೆ ಬರಲ್ಲ ಅಂದಿದ್ದಕ್ಕೆ ಯುವಕನ ಕೊಲೆಯಾಗಿದೆ, ಆತ ಒಬ್ಬ ದಲಿತ ಯುವಕ ಎಂದೆಲ್ಲ ಹೇಳಿಕೆ ಕೊಟ್ಟಿದ್ದಾರೆ. ಯುವಕನ ಕೊಲೆಯಾಗಿದೆ ಅಂದಮೇಲೆ ಅದೊಂದು ಜೀವವಲ್ಲವೇ? ಅಲ್ಲಿ ಸಮಾಜದಲ್ಲಿನ ಸ್ವಾಸ್ಥ್ಯ ಕದಡುವ ಹೇಳಿಕೆಯಾಕೆ? ಗೃಹ ಸಚಿವರ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
Big News: ಡೈಲಿ ಹಂಟ್ ಪೋಷಕ ಸಂಸ್ಥೆ ವರ್ಸೆ ಇನ್ನೋವೇಶನ್ ಗೆ ಸಿಕ್ಕಿದೆ 805 ಮಿಲಿಯನ್ ಡಾಲರ್ ಫಂಡಿಂಗ್
ಹಿಂದೂ ಕಾಳಜಿ ಬಗ್ಗೆ ಮಾತನಾಡುವ ಬಿಜೆಪಿಯವರು ಗೃಹ ಸಚಿವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಿಂದೂ ಯುವಕನ ಹತ್ಯೆಯಾಗಿದೆ ಎಂದಾದರೂ ಹೆಳಬೇಕಿತ್ತು ಅದೆಲ್ಲವನ್ನೂ ಬಿಟ್ಟು ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ಕೊಟ್ಟಿದ್ದಾರೆ. ಸಣ್ಣತನದ ಹೇಳಿಕೆ ನೀಡಿದ್ದಾರೆ. ಅವರಿಗೆ ಗೃಹ ಸಚಿವರೆಂಬ ಅರಿವೂ ಇಲ್ಲ. ಜವಾಬ್ದಾರಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯುವಕನ ಹತ್ಯೆ ನಡೆದು 24 ಗಂಟೆ ಮೇಲಾಗಿದೆ ಗೃಹ ಸಚಿವರು ಒಂದು ಹೇಳಿಕೆ ಕೊಡುತ್ತಾರೆ. ಕೆಲ ಹೊತ್ತಲ್ಲೇ ಪೊಲೀಸ್ ಆಯುಕ್ತರು ಒಂದು ಹೇಳಿಕೆ ನೀಡುತ್ತಾರೆ. ಇದರಲ್ಲಿ ಸತ್ಯಾಸತ್ಯತೆ ಯಾವುದು? ಇಂಥಹ ಗೃಹ ಸಚಿವರಿರುವುದು ವಿಪರ್ಯಾಸ. ಗೃಹ ಸಚಿವರೇ ಈ ರೀತಿ ಹೇಳಿಕೆ ಕೊಟ್ಟರೆ ಪೊಲೀಸ್ ಇಲಾಖೆಯವರಾದರೂ ಏನು ಮಾಡಲು ಸಾಧ್ಯ? ಸಮಾಜದಲ್ಲಿ ವಿಶ್ವಾಸ ಹಾಳು ಮಾಡುವ ಹೇಳಿಕೆ ಕೊಡುವುದನ್ನು ಬಿಟ್ಟು ಮಾಹಿತಿ ಅರಿತು ಮಾತನಾಡಲಿ ಎಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ,ಅರಗ