ಮ್ಯಾರಿಯಟ್ ಇಂಟರ್ನ್ಯಾಷನಲ್ ಭಾರತದಾದ್ಯಂತ ಇರುವ ತನ್ನ ಹೋಟೆಲ್ ಆವರಣದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿ, ಗ್ರಾಹಕರಿಗೆ ಹೊಸ ಸೇವೆ ನೀಡಲಿದೆ.
ಚಾರ್ಜ್ ಝೋನ್ ಇವಿ ಚಾರ್ಜಿಂಗ್ ನೆಟ್‌ವರ್ಕ್ ಕಂಪನಿಯು ಮ್ಯಾರಿಯೊಟ್ ಇಂಟರ್‌ನ್ಯಾಶನಲ್ ಜೊತೆ ಪಾಲುದಾರಿಕೆ ಹೊಂದಿದ್ದು, ಭಾರತದಲ್ಲಿನ ತನ್ನ ಎಲ್ಲಾ ಹೋಟೇಲ್ ಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ.
ಡಿಎ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಡಿಸೆಂಬರ್ 2022 ರ ವೇಳೆಗೆ 100 ಪ್ಲಸ್ ಇವಿ ಚಾರ್ಜರ್‌ಗಳ ಸ್ಥಾಪನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ರಾಪಿಡ್ ಡಿಸಿ ಚಾರ್ಜಿಂಗ್ ಪಾಯಿಂಟ್‌ಗಳು 45-60 ನಿಮಿಷಗಳಲ್ಲಿ 80 ಪ್ರತಿಶತ ಚಾರ್ಜ್ ಅನ್ನು ಒದಗಿಸುತ್ತದೆ ಮತ್ತು ಇವಿಯ ಬ್ಯಾಟರಿ ಗಾತ್ರವನ್ನು ಅವಲಂಬಿಸಿ 90-120 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಅನ್ನು ಒದಗಿಸುತ್ತದೆ.
ಈ ಚಾರ್ಜರ್‌ಗಳು ಅಗತ್ಯವಿರುವಲ್ಲೆಲ್ಲಾ ಟೈಪ್-2 ಎಸಿ ಚಾರ್ಜರ್‌ಗಳ ಹೆಚ್ಚುವರಿ ಸೌಲಭ್ಯದೊಂದಿಗೆ ಬರುತ್ತವೆ.