ನವದೆಹಲಿ: ಕಾಂಗ್ರೆಸ್ ನಾಯಕ ದಿ. ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಅವರು ಇಂದು ತಮ್ಮ ಮುಂದಿನ ದಾರಿಯ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಪ್ತ ಸಹಾಯಕ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ 2020 ರಲ್ಲಿ ನಿಧನರಾದರು.
41 ವರ್ಷದ ಫೈಸಲ್ ಪಟೇಲ್ ಅವರು ಔಪಚಾರಿಕವಾಗಿ ಕಾಂಗ್ರೆಸ್ ಸೇರುವ ಬಗ್ಗೆ ಖಚಿತವಾಗಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.
ಕಾದು ಸುಸ್ತಾಗಿದ್ದೇನೆ. ಸ್ಥಾನ ಮಾನ ನೀಡುವ ಬಗ್ಗೆ ಯಾವುದೇ ಪ್ರೋತ್ಸಾಹವಿಲ್ಲ. ನನ್ನ ಆಯ್ಕೆಗಳು ಮುಕ್ತವಾಗಿವೆ ಎಂದು ಅವರು ಇಂದು ಟ್ವೀಟ್ ಮಾಡಿದ್ದಾರೆ.
ಫೈಸಲ್ ಪಟೇಲ್ ಅವರ ತವರು ರಾಜ್ಯವಾದ ಗುಜರಾತ್ ನಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆಗೆ ಮುನ್ನ ಬೇರೆ ಪಕ್ಷದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಕುರಿತು ಈ ಪೋಸ್ಟ್ ಮಾಡಿರಬಹುದು ಎಂದು ಹೇಳಲಾಗಿದೆ.
https://twitter.com/mfaisalpatel/status/1511222961771999232