alex Certify ಕೊನೆಗೂ ಹೊರಬಿತ್ತು ಆಲಿಯಾ ಭಟ್​ – ರಣಬೀರ್​ ಕಪೂರ್ ಮದುವೆ ದಿನಾಂಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಹೊರಬಿತ್ತು ಆಲಿಯಾ ಭಟ್​ – ರಣಬೀರ್​ ಕಪೂರ್ ಮದುವೆ ದಿನಾಂಕ..!

ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ವಿವಾಹ ಸದ್ಯ ಬಿಟೌನ್​​ನಲ್ಲಿ ಟ್ರೆಂಡಿಂಗ್​​ನಲ್ಲಿರುವ ವಿಚಾರವಾಗಿದೆ. ರಣಬೀರ್​ ಆಲಿಯಾ ವಿವಾಹದ ಬಗ್ಗೆ ದಿನಕ್ಕೊಂದು ಪ್ರಮುಖ ಮಾಹಿತಿ ಹೊರ ಬೀಳುತ್ತಲೇ ಇದೆ. ಇದೀಗ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಇವರ ವಿವಾಹದ ದಿನಾಂಕ ಕೂಡ ಹೊರಬಿದ್ದಿದೆ ಎನ್ನಲಾಗಿದೆ. ಹೌದು..! ಏಪ್ರಿಲ್​ 13ರಿಂದ 17ರ ಒಳಗಾಗಿ ರಣಬೀರ್​ ಹಾಗೂ ಆಲಿಯಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್​ 13ರಿಂದ 17ರ ನಡುವೆ ಈ ಜೋಡಿ ಹಸೆಮಣೆ ಏರಲಿದೆ. ಈ ದಿನಾಂಕದಂದು ಬಿಡುವು ಮಾಡಿಕೊಳ್ಳುವಂತೆ ಈ ಜೋಡಿಸ್ನೇಹಿತರಲ್ಲಿ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.

ಈ ಮೊದಲೇ ಏಪ್ರಿಲ್ ಮಧ್ಯ ವಾರದಲ್ಲಿ ರಣಬೀರ್​ ಹಾಗೂ ಆಲಿಯಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಬ್ಯುಸಿ ಶೂಟಿಂಗ್ ಶೆಡ್ಯೂಲ್​ನ ನಡುವೆ ಬಿಡುವು ಮಾಡಿಕೊಂಡು ಈ ಜೋಡಿ ವೈವಾಹಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಮದುವೆ ಮುಗಿದ ಬಳಿಕ ರಣಬೀರ್​ ರಶ್ಮಿಕಾ ಮಂದಣ್ಣ ಜೊತೆಯಲ್ಲಿ ಆನಿಮಲ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಲಿದ್ದಾರೆ . ಇತ್ತ ಆಲಿಯಾ ಭಟ್​​ ಮದುವೆ ಕಾರ್ಯಕ್ರಮದ ಬಳಿಕ ತಮ್ಮ ಮೊದಲ ಹಾಲಿವುಡ್​ ಸಿನಿಮಾದ ಶೂಟಿಂಗ್​​ಗೆ ಅಮೆರಿಕಕ್ಕೆ ಹಾರಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...