ಹಚಿಕೋ ಕತೆ ನಿಮಗೆ ನೆನಪಿದ್ದಿರಬಹುದು . ಜಪಾನ್ನ ನಾಯಿಯೊಂದು ತನ್ನ ಮಾಲೀಕನ ಬರುವಿಕೆಗಾಗಿ ದಶಕಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ಕಾದಿತ್ತು. ಉಕ್ರೇನ್ನಲ್ಲಿ ಇತ್ತೀಚಿಗೆ ನಡೆದ ಘಟನೆಯೊಂದು ಇದೇ ಕತೆಯನ್ನು ಮತ್ತೊಮ್ಮೆ ನೆನಪಿಸುವಂತಿದೆ.
ಯುರೋಪಿಯನ್ ಮೀಡಿಯಾಗಳು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ತನ್ನ ಮಾಲೀಕನ ಮೃತದೇಹದ ಪಕ್ಕದಲ್ಲೇ ಒಂಚೂರು ಕದಲದೇ ಕುಳಿತಿರುವ ನಾಯಿಯ ಫೋಟೋಗಳು ಮನಕಲಕುವಂತಿದೆ. ಯುದ್ಧದಲ್ಲಿ ತನ್ನ ಮಾಲೀಕ ಸತ್ತಿದ್ದಾನೆ ಎಂಬ ಅರಿವೇ ಇಲ್ಲದಂತೆ ಶ್ವಾನವು ಮೃತದೇಹದ ಬಳಿ ಕುಳಿತಿದೆ.
ಯುರೋಪಿಯನ್ ಮೀಡಿಯಾ ಆರ್ಗನೈಸೇಷನ್ ನೆಕ್ಸ್ಟಾ ನೀಡಿರುವ ಮಾಹಿತಿಯ ಪ್ರಕಾರ, ರಷ್ಯಾದ ಪಡೆಗಳು ಈತನನ್ನು ಕೊಲೆ ಮಾಡಿದ್ದು ಮಾಲೀಕನೊಂದಿಗೆ ಪ್ರೀತಿಯಿಂದ ಇದ್ದ ಶ್ವಾನ ಮಾತ್ರ ಮೃತದೇಹದಿಂದ ಒಂದಿಂಚೂ ಕದಲದೇ ಹಾಗೆಯೇ ಇದೆ.