alex Certify ಕಾರ್ಪೋರೇಟ್​ ದೇಣಿಗೆ ಸಂಗ್ರಹ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ಪೋರೇಟ್​ ದೇಣಿಗೆ ಸಂಗ್ರಹ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡ ಬಿಜೆಪಿ

2019-20ನೇ ಸಾಲಿನಲ್ಲಿ ಆಡಳಿತಾರೂಡ ಬಿಜೆಪಿಯು ಅತೀ ಹೆಚ್ಚು ಕಾರ್ಪೋರೇಟ್​ ದೇಣಿಗೆಗಳನ್ನು ಸ್ವೀಕರಿಸಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಅತ್ಯಧಿಕ ಮೊತ್ತದ ಅಂದರೆ ₹921.95 ಕೋಟಿ ಕಾರ್ಪೋರೇಟ್​ ದೇಣಿಗೆಯನ್ನು ಸಂಗ್ರಹಿಸಿದೆ. 2014-15ನೇ ಸಾಲಿನಲ್ಲಿ 573.18 ಕೋಟಿ ಕಾರ್ಪೋರೇಟ್​ ನಿಧಿ ಸಂಗ್ರಹಿಸಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಟಿಸಿದ ತನ್ನ ವರದಿಯಲ್ಲಿ, 2019-20ರಲ್ಲಿ ರಾಜಕೀಯ ಪಕ್ಷಗಳ ಒಟ್ಟು ಕೊಡುಗೆಯಲ್ಲಿ ಕಾರ್ಪೊರೇಟ್ ನಿಧಿಗಳು 91% ರಷ್ಟಿದೆ ಎಂದು ಸೇರಿಸಲಾಗಿದೆ. ಅಧ್ಯಯನವು ಬಿಜೆಪಿ, ಕಾಂಗ್ರೆಸ್, ಸಿಪಿಐಎಂ, ಎನ್‌ಸಿಪಿ ಮತ್ತು ಟಿಎಂಸಿಯನ್ನು ಒಳಗೊಂಡಿದೆ.

2019-20ರಲ್ಲಿ ಬಿಎಸ್​ಪಿ ತಾನೂ 20 ಸಾವಿರ ರೂಪಾಯಿಗಳಿಗಿಂತ ಅಧಿಕ ಮೊತ್ತದ ಯಾವುದೇ ಕೊಡುಗೆಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದ ಬಳಿಕ ಎಡಿಆರ್​ನಿಂದ ಹೊರಬಿದ್ದಿದೆ. ಇನ್ನು ಸಿಪಿಐ ಕೂಡ ಯಾವುದೇ ಕಾರ್ಪೋರೇಟ್​ ದೇಣಿಗೆಯನ್ನು ಘೋಷಿಸಿಲ್ಲ. ಭಾರತೀಯ ಚುನಾವಣಾ ಆಯೋಗದ ಕಾನೂನಿನ ಪ್ರಕಾರ 20 ಸಾವಿರಕ್ಕಿಂತ ಅಧಿಕ ಮೊತ್ತದ ಯಾವುದೇ ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.

ವರದಿಯ ಪ್ರಕಾರ, 2019-20ರ ಆರ್ಥಿಕ ವರ್ಷದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅಗ್ರ ದಾನಿಯಾಗಿದೆ. ಬಿಜೆಪಿಗೆ ₹216.75 ಕೋಟಿ ಹಾಗೂ ಕಾಂಗ್ರೆಸ್‌ಗೆ ₹31 ಕೋಟಿ ಕೊಡುಗೆ ನೀಡಿದೆ. ಎನ್​ಸಿಪಿ​ ಅಗ್ರ ದಾನಿ ಬಿ.ಜಿ. ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈ. ಲಿಮಿಟೆಡ್, ಇದಕ್ಕೆ ₹25 ಕೋಟಿ ನೀಡಿದೆ. ಇತರ ದೊಡ್ಡ ದಾನಿಗಳಲ್ಲಿ, ಐಟಿಸಿ ಬಿಜೆಪಿಗೆ ₹ 55 ಕೋಟಿ ಮತ್ತು ಕಾಂಗ್ರೆಸ್‌ಗೆ ₹ 13.6 ಕೋಟಿ ಕೊಡುಗೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...